*ರಿಷಬ್ ಪಂತ್ ನೂತನ ಉಪನಾಯಕ/ ಕರ್ನಾಟಕದ ರಾಹುಲ್, ಪ್ರಸಿದ್ಧ, ಕರುಣ್ ನಾಯರ್ ಗೆ ಸ್ಥಾನ / ಜೂನ್ 20ರಿಂದ ಐದು ಟೆಸ್ಟಗಳ ಸರಣಿ*
ಮುಂಬೈ : ಆಂಗ್ಲರ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಗೆ 18 ಸದಸ್ಯರ ಭಾರತ ತಂಡ ಆಯ್ಕೆ ಮಾಡಲಾಗಿದ್ದು, ನೂತನ ನಾಯಕನಾಗಿ ಐಪಿಎಲ್ ನಲ್ಲಿ ಗುಜರಾತ್ ತಂಡ ಮುನ್ನಡೆಸುತ್ತಿರುವ ಶುಭಮನ ಗಿಲ್ ನಿಯುಕ್ತಿಗೊಂಡಿದ್ದಾರೆ.


ಇಂದು ಶನಿವಾರ ಮುಂಬೈನ ಪ್ರಧಾನ ಕಚೇರಿಯಲ್ಲಿ ಅಜಿತ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಭೆಯಲ್ಲಿ ಭಾರತದ 37ನೇ ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಅವರನ್ನು ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಿದ್ದು,. ಸಾಯಿ ಸುದರ್ಶನ್ ಮತ್ತು ಅರ್ಶ್ದೀಪ್ ಸಿಂಗ್ ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಫಿಟ್ನೆಸ್ ಕಾರಣದಿಂದ ಮಹ್ಮದ್ ಶಮಿಗೆ ಅವಕಾಶ ನಿರಾಕರಿಸಲಾಗಿದೆ. ಕರ್ನಾಟಕದ ಭರವಸೆಯ ದಾಂಡಿಗ ಕೆ.ಎಲ್.ರಾಹುಲ್, ವೇಗಿ ಪ್ರಸಿದ್ಧ ಕೃಷ್ಣ ಮತ್ತು ದೇಶಿಯ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ ಕರಣ್ ನಾಯರ್ ,ಭಾರತ ಎ ನಾಯಕ ಅಭಿಮನ್ಯು ಈಶ್ವರನ್ ಅವರಿಗೆ ಅವಕಾಶ ನೀಡಲಾಗಿದೆ.
ಇದುವರೆಗೆ ಗಿಲ್ ಏಕದಿನ ಮತ್ತು ಟಿ ಟ್ವೆಂಟಿ ಮಾದರಿಯಲ್ಲಿ ಉಪನಾಯಕರಾಗಿದ್ದರು. 32 ಟೆಸ್ಟ್ ಆಡಿರುವ ಗಿಲ್ ಐದು ಶತಕಗಳು ಸೇರಿದಂತೆ 1,893 ರನ್ಗಳನ್ನು ಗಳಿಸಿದ್ದಾರೆ.
ಇಂಗ್ಲೆಂಡ್ ಸರಣಿಗೆ ತಂಡ ಇಂತಿದೆ: ಶುಭಮನ್ ಗಿಲ್ (ನಾಯಕ) ರಿಷಭ್ ಪಂತ್ (ವಿಕೆಟ್ ಕೀಪರ್ ಹಾಗೂ ಉಪನಾಯಕ),ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶ, ಅಭಿಮನ್ಯು ಈಶ್ವರನ್, ಕರುಣ ನಾಯರ್ , ನಿತೀಶಕುಮಾರ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್
ಟೆಸ್ಟ್ ಸರಣಿ ವೇಳಾಪಟ್ಟಿ:
ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್ಬಾಸ್ಟನ್, ಬರ್ಮಿಂಗ್ಹ್ಯಾಮ್
3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್




