*ಅಸೂಟಿಗೆ ಕ್ರೀಡಾ ಪ್ರಾಧಿಕಾರ*/ *ಬೇವಿನಮರದಗೆ ಗಡಿ ಅಭಿವೃದ್ಧಿ ಹೊಣೆ*
ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ 44 ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ, ಉಪಾಧ್ಯಕ್ಷ ಹುದ್ದೆಗೆ ನೇಮಕ ಮಾಡಿ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಅತ್ಯಂತ ಮಹತ್ವದ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾದಿ ಮಾಜಿ ಸಂಸದರಾಗಿ ಇಂದಿಗೂ ಸಾರಿಗೆ ಬಸ್ ನಲ್ಲಿ ಸಂಚರಿಸುವ, ಸರಳ,ಸಜ್ಜನ ರಾಜಕಾರಣಿ
ಪ್ರೋ.ಐ.ಜಿ.ಸನದಿ ಪುತ್ರ ಅಲ್ಲದೇ ರಾಹುಲ್ ಗಾಂಧಿ ಬಳಗದ ಆಪ್ತ ಬಳಗದ ಶಾಕೀರ ಸನದಿಗೆ ದೊರಕಿದೆ.
ಘಟಾನುಘಟಿಗಳ ಪೈಪೋಟಿ ಇತ್ತಾದರೂ ಶಾಕೀರನಂತಹ ಯುವ ಮುಖಂಡನಿಗೆ ಒಲಿದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಆಕಾಂಕ್ಷಿಯಾಗಿದ್ದ ಶಾಕೀರ ಈ ಬಾರಿಯೂ ಧಾರವಾಡ ಅಥವಾ ಹಾವೇರಿಯ ಯತ್ನ ನಡೆಸಿದ್ದರು.
ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಶಾಕೀರ ಸರ್ಕಾರ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನಸಾಮಾನ್ಯರಿಗೆ , ಬಡವರಿಗೆ ಅನುಕೂಲವಾಗುವ ಯೋಜನೆಗಳನ್ನು ಪ್ರಾಧಿಕಾರದಿಂದ ಮಾಡುವ ಕಳಕಳಿ ಹೊಂದಿದ್ದಾರೆ.ಇವರು ಮಾಜಿ ಸಂಸದರ ಮಗನಾಗಿದ್ದರೂ ಸಣ್ಣ ಕಳಂಕ ಹೊಂದದ ತಂದೆಗೆ ತಕ್ಕ ಮಗ.
ಕಳೆದ ಬಾರಿ ವಿಧಾನಸಭೆ ಚುನಾವಣೆ ವೇಳೆ ನವಲಗುಂದ ಕ್ಷೇತ್ರದ ಟಿಕೆಟ್ ವಂಚಿತರಾದ ವಿನೋದ ಅಸೂಟಿಗೆ ರಾಜ್ಯ ಮಟ್ಟದ ಅತ್ಯಂತ ಮಹತ್ವದ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸ್ಥಾನ ನೀಡಿದ್ದು , ಇವರಿಗೂ
ನಿಗಮ ಮಂಡಳಿಯಲ್ಲಿ ಸ್ಥಾನ ಸಿಗುವುದು ಪಕ್ಕಾ ಆಗಿತ್ತು.
ಅಲ್ಲದೆ ಶಿಗ್ಗಾಂವಿ ಮೂಲದ ಮಾಜಿ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಅವರಿಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ನೀಡಲಾಗಿದೆ.
ಬೇವಿನ ಮರದ ಅವರು ಉತ್ತಮ ಸಂಘಟಕರಾಗಿದ್ದು ಕ್ಷೇತ್ರದಲ್ಲಿ ತನ್ನದೇ ಹಿಡಿತ ಹೊಂದಿದ್ದಾರೆ.