*ಐಪಿಎಲ್ 18ರ ಹೊಡೆ ಬಡಿಯ ಹಣಾಹಣಿಗೆ ಇಂದು ವಿದ್ಯುಕ್ತ ಚಾಲನೆ* / *ಎರಡು ತಿಂಗಳ ಮುಖಾಮುಖಿಯ ಮೊದಲ ಸೆಣಸಾಟ KKR Vs RCB*
ಹುಬ್ಬಳ್ಳಿ : ಚುಟುಕು ಕ್ರಿಕೆಟ್ ಸಮರಕ್ಕೆ ನಾಂದಿ ಹಾಡಿ, ಹೊಡೆಬಡಿಯ ಆಟಕ್ಕೆ ಹೊಸ ಭಾಷ್ಯ ಬರೆದ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ(IPL) ಈಗ 18ರ ಹರೆಯ.ಇಂದಿನಿಂದ ಆರಂಭಗೊಂಡು ಮೇ 25ರವರೆಗೆ ಸುಮಾರು ಎರಡು ತಿಂಗಳಿಗೂ ಹೆಚ್ಚು ಸಾಗುವ T-20 ಕ್ರಿಕೆಟ್ ಉತ್ಸವದಲ್ಲಿ 10 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
ವಿಜೇತರು 20 ಕೋಟಿ ರೂ.ಪಡೆಯಲಿದ್ಧು, ರನ್ನರ್ ಅಪ್ ತಂಡ 12.5, ಅಲ್ಲದೆ ಮೂರು ಹಾಗೂ 4ನೇ ಸ್ಥಾನ ಪಡೆದವುಗಳು 8.75 ಕೋಟಿ ಪಡೆವರು. ಬೌಲರ್ ಗಳಿಗೂ ಬೆಲೆ ತುಂಬುವ ಹೊಸ ನಿಯಮಗಳು ಮತ್ತಷ್ಟು ರೋಚಕತೆಗೆ ಕಾರಣವಾಗಲಿದೆಯಲ್ಲದೇ, ಹೊಸ ಪ್ರತಿಭೆಗಳು , ಅಲ್ಲದೆ ವಿದೇಶಿ ಆಟಗಾರರು ತಮ್ಮ ತಮ್ಮ ಸಾಮರ್ಥ್ಯ ಮೆರೆಯಲು ಹಾತೊರೆಯುತ್ತಿದ್ದಾರೆ. ದೇಶಿಯ ಹಳೆಯ ಹುಲಿಗಳು ಮತ್ತೊಮ್ಮೆ ತಮ್ಮ ಬ್ಯಾಟಿಂಗ್, ಬಾಲಿಂಗ್ ಮೂಲಕ ಮಿಂಚು ಹರಿಸಲು ಸನ್ನದ್ದರಾಗಿದ್ದು, ಹಲವು ದಿನಗಳ ನಿರೀಕ್ಷೆ ಇಂದು ಮುಕ್ತಾಯಗೊಂಡು ಹಲವು ಹೊಸ ದಾಖಲೆಗಳು ದಾಖಲಾಗುವದು ನಿಶ್ಚಿತ.
ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ ಪಾಂಡ್ಯ, ಆರ್ಸಿಬಿಗೆ ರಾಜ್ಯ ಪಾಟೀದಾರ, ಚೆನ್ನೈ ಸೂಪರ್ ಕಿಂಗ್ಸ್ ಗೆ ಋತುರಾಜ ಗಾಯಕವಾಡ, ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಜು ಸಾಮಸನ್, ಶ್ರೇಯಸ್ ಅಯ್ಯರ್ ಪಂಜಾಬ್ ಕಿಂಗ್ಸ್, ಹೈದರಾಬಾದ್ ಗೆ ಪ್ಯಾಟ್ ಕಮಿನ್ಸ್, ಲಖನೌ ಗೆ ರಿಷಬ್ ಪಂತ್, ದಿಲ್ಲಿ ಕ್ಯಾಪಿಟಲ್ ಅಕ್ಷರ ಪಟೇಲ್, ಗುಜರಾತ್ ಟೈಟಾನ್ ಗೆ, ಶುಭಮನ್ ಗಿಲ್, ಕೆಕೆಆರ್ ನ್ನು ಅಜಿಂಕ್ಯ ರಹಾನೆ ನಾಯಕರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
*ಹುಬ್ಬಳ್ಳಿಯ ನಿರ್ಣಾಯಕ*
ಐಪಿಎಲ್ ಗೆ ಭಾರತದ 7 ನಿರ್ಣಾಯಕರ ಜೊತೆ ಮೂರೂ ಅಂತಾರಾಷ್ಟ್ರೀಯ ಅಂಪಾಯರ್ ಗಳು ಇದ್ದು ಇವರಲ್ಲಿ ಹುಬ್ಬಳ್ಳಿ ಮೂಲದ ಅಭಿಜಿತ್ ಬೆಂಗೇರಿ ಸಹ ಸೇರಿದ್ದಾರೆ.
*ಮೊದಲ ಸೆಣಸಾಟ* :
ಇಂದು ಕೊಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಟಾಸ್ ಗೂ ಮೊದಲು ನಡೆಯಲಿರುವ ವರ್ಣ ರಂಜಿತ ಉದ್ಘಾಟನೆಗೆ ಬಾಲಿವುಡ್ ಗಾಯಕರು, ತಾರೆಯರು ಕಳೆ ಕಟ್ಟಲಿದ್ದಾರೆ.
ಹೊಸ ಹುರುಪಿನಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ಇಂಡಿಯನ್ ಇಂದು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ಎದುರಿಸಲಿದೆ. ಈ ಮಧ್ಯೆ ಹವಾಮಾನ ಇಲಾಖೆ ಶನಿವಾರ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಈಡನ್ ಗಾರ್ಡನ್ನಲ್ಲಿ ನಡೆಯುವ ಈ ಪಂದ್ಯ ಮಳೆಯ ಪಾಲಾಗುವ ಸಾಧ್ಯತೆಯಿದೆ.
31 ವರ್ಷ ವಯಸ್ಸಿನ ರಜತ್ ಪಾಟೀದಾರ್ ಮೊದಲ ಬಾರಿ ರಾಯಲ್ ಚಾಲೆಂಜರ್ಸ್ ಮುನ್ನಡೆಸುತ್ತಿದ್ದು
17 ವರ್ಷಗಳ ಹಿಂದೆ ಐಪಿಎಲ್ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯ ಈ ಎರಡು ತಂಡಗಳ ನಡುವೆ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಕೋಲ್ಕತ್ತ ತಂಡದ ಬ್ರೆಂಡನ್ ಮೆಕ್ಕಲಂ 158 ರನ್ ಗಳಿಸಿ ಟೂರ್ನಿಯ ಮೊದಲ ಶತಕ ದಾಖಲಿಸಿದ್ದರು. ಕೋಲ್ಕತ್ತದ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಆರ್ಸಿಬಿಗೆ ಮಾತ್ರ ಪ್ರಶಸ್ತಿ ಇನ್ನೂ ಕೈಗೆಟುಕಿಲ್ಲ. ಕೋಲ್ಕತ್ತ ತಂಡದ ನಾಯಕತ್ವವೂ ಬದಲಾವಣೆಯಾಗಿದ್ದು, ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಅಜಿಂಕ್ಯ ರಹಾನೆ ಸಾರಥ್ಯ ವಹಿಸಿದ್ದಾರೆ.
ಆರ್ಸಿಬಿಯಲ್ಲೂ ಕೊಹ್ಲಿ ಅವರೊಂದಿಗೆ ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟಗಾರ ಫಿಲ್ ಸಾಲ್ಟ್ ಆಡಲು ಇಳಿಯಲಿದ್ದಾರೆ. ತಂಡದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್, ಜಿತೇಶ್ ಶರ್ಮಾರಂತಹ ನುರಿತ ಫಿನಿಷರ್ಗಳಿದ್ದಾರೆ.
ಅನುಭವಿ ಮೊಹಮ್ಮದ್ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ಹೊಣೆ ಜೋಶ್ ಹ್ಯಾಜಲ್ವುಡ್ ಮತ್ತು ಅನುಭವಿ ಭುವನೇಶ್ವರ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ .ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್ ಅಂಥ ಆಲ್ರೌಂಡರ್ಗಳೂ ತಂಡದಲ್ಲಿದ್ದಾರೆ.
ಪ್ರಮುಖ ಸುದ್ದಿ*
*ಕರ್ನಾಟಕ ಬಂದ್* ಗೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಿಯೂ ಯಾವುದೇ ಪರಿಣಾಮ ಬೀರಿಲ್ಲ.