ಹುಬ್ಬಳ್ಳಿ :ಕೇಂದ್ರ ಲೋಕಸೇವಾ ಆಯೋಗದ ನಡೆಸಿದ 2023ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ( UPSC)2023 ಹುಬ್ಬಳ್ಳಿಯ ಯುವತಿಯೊಬ್ಬಳು 440 RANk ನಲ್ಲಿ ಉತ್ತೀರ್ಣಳಾಗಿ ವಾಣಿಜ್ಯ ರಾಜಧಾನಿಗೆ ಕೀರ್ತಿ ತಂದಿದ್ದಾರೆ.
ಅಮರಗೋಳ ಎಪಿಎಂಸಿಯಲ್ಲಿ ರವಾ, ತೈಲದ ವ್ಯಾಪಾರಸ್ಥರಾಗಿರುವ ಅಭಯ್ ಪಾಲರೇಚಾ ಅವರ ಪುತ್ರಿ ಕೃಪಾ ಜೈನ ಈ ಸಾಧನೆ ಮಾಡಿದವರಾಗಿದ್ದಾರೆ.
ಯಾವುದೇ ಕೋಚಿಂಗ್ ಇಲ್ಲದೆ ಸ್ವಂತ ಪರಿಶ್ರಮದಿಂದ ಅಧ್ಯಯನ ಮಾಡಿ ಮೂರನೇ ಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.
ಕೃಪಾ ಇವರು ಡಿ.ಕೆ ಪಬ್ಲಿಕ್ ಸ್ಕೂಲ್ನಲ್ಲಿ ಮಾಧ್ಯಮಿಕ ಶಿಕ್ಷಣ, ಕೆಎಲ್ಇ ಸಂಸ್ಥೆಯ ಪ್ರೇರಣಾ ಕಾಲೇಜಿನಲ್ಲಿ ಪಿಯುಸಿ, ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ (CS) ಮುಗಿಸಿ ಯುಪಿಎಸ್ಸಿ ಪರೀಕ್ಷೆಗೆ ತೊಡಗಿಸಿಕೊಂಡಿದ್ದರು.
ತಂದೆ ಅಭಯ ಹಾಗೂ ತಾಯಿ ಇಂದಿರಾ ಇಬ್ಬರೂ ಮಗಳು ಮಾಡಿದ ದೊಡ್ಡ ಸಾಧನೆಗೆ ಸಂಭ್ರಮಿಸುತ್ತಿದ್ದಾರೆ.
ಯಾವ ತರಬೇತಿ ಪಡೆಯದೆ UPSC ಪಾಸು ಮಾಡಿರುವ ಕೃಪಾ ನಗರದ MWB ಉದ್ಯಮ ಸಮೂಹದ ಮುಖ್ಯಸ್ಥ ರಮೇಶ್ ಬಾಫಣಾ ಅವರ ಅಳಿಯಂದಿರ ಮಗಳು.