*ಸಾಮಾಜಿಕ ಕಾಳಜಿಯ , ಶೆಟ್ಟರ್ ನಿಕಟವರ್ತಿ ಗೆ 55 ನೇ ಜನುಮದಿನದ ಸಂಭ್ರಮ*
ಹುಬ್ಬಳ್ಳಿ : ‘ಮನುಷ್ಯ ತಾನು ಸಮಾಜದಿಂದ ಪಡೆದುದಕ್ಕಿಂತ ಹೆಚ್ಚಿನದನ್ನು ಕೊಟ್ಟಾಗ ಮಾತ್ರ ಆತನ ಜೀವನ ಯಶಸ್ಸು ಪಡೆಯುತ್ತದೆ’ ಎಂಬ ದಿ. ಶಿವರಾಮ ಕಾರಂತರ ಮಾತಿನಂತೆ ಹಂತ ಹಂತವಾಗಿ ಮೇಲೇರಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯಂತಹ ಆಯಕಟ್ಟಿನ ಸ್ಥಾನ ಅಲಂಕರಿಸಿ ಅನೇಕ ರಚನಾತ್ಮಕ ಕೆಲಸ ಮಾಡಿರುವವರು ಹುಬ್ಬಳ್ಳಿಯ ಎಸ್ ಎಸ್ ಕೆ ಸಮಾಜದ ಪ್ರಭಾವಿ ಮುಖಂಡ ನಾಗೇಶ ಕಲಬುರ್ಗಿ.
2020ರಲ್ಲಿ ಯಡಿಯೂರಪ್ಪ ಸರ್ಕಾರ ಆಳ್ವಿಕೆ ಬಂದ ನಂತರ
ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಕಲಬುರ್ಗಿಯವರು ನೇಮಕಗೊಂಡ ನಂತರ ಕೋವಿಡ್ ಮಹಾಮಾರಿ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಹಾಕಿತಾದರೂ ಲಾಕ್ ಡೌನ್ ತೆರವಿನ ನಂತರ ಎಲ್ಲರೂ ಹೌದೆನ್ನುವಂತೆ ಅಕ್ರಮ ಲೇಔಟ್ಗಳ ವಿರುದ್ಧ ಕಠಿಣ ಮುಲಾಜಿಲ್ಲದೇ ಕಾರ್ಯಾಚರಣೆ ಕೈಗೊಂಡು ಹೆಸರು ಮಾಡಿದವರು.ಭೂಗಳ್ಳರಿಗೆ ದುಃಸ್ವಪ್ನವಾದವರು.
ಚಿಕ್ಕ ವಯಸ್ಸಿನಲ್ಲೇ ಸಂಘದ ಪರಿವಾರದ ಸ್ವಯಂಸೇವಕನಾಗಿ ಗುರುತಿಸಿಕೊಂಡು 1990ರಲ್ಲಿ 37ನೇ ವಾರ್ಡಿನ ಯುವ ಮೋರ್ಚಾ ಉಪಾಧ್ಯಕ್ಷನಾಗುವ ಮೂಲಕ ಕಮಲ ಪಡೆಗೆ 1992ರಲ್ಲಿ ವಾರ್ಡ ಅಧ್ಯಕ್ಷ, 1998ರಲ್ಲಿ ಗ್ರಾಮೀಣ ಘಟಕದ ಉಪಾಧ್ಯಕ್ಷ ಹೀಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸಿ 2001ರಲ್ಲಿ 45ನೇ ವಾರ್ಡಿನಿಂದ ಪಾಲಿಕೆಗೆ ಆಯ್ಕೆಯಾಗಿ ಹಣಕಾಸು ಅಲ್ಲದೇ ಲೆಕ್ಕಪತ್ರ ಸ್ಥಾಯಿ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದರು.
ವಾರ್ಡ ವಿಂಗಡಣೆಯ ನಂತರ ಪಾಲಿಕೆಗೆ ಸ್ಪರ್ಧಿಸದೇ ಪಕ್ಷದ ಸಂಘಟನೆಯಲ್ಲೇ
ಹೆಚ್ಚಾಗಿ ತೊಡಗಿಸಿಕೊಂಡ ಅವರು 2009ರಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ
ಸದಸ್ಯರಾಗಿ ನಾಮನಿರ್ದೇಶನಗೊಂಡರು.
2009 ಹಾಗೂ 2012ರಲ್ಲಿ ಪ್ರತಿಷ್ಠಿತ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷರಾಗಿ ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ ಸಹಿತ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಸಂಘಟನೆಯಲ್ಲಿ ಹೊಸ ಮಿಂಚು ಹರಿಸಿದರು.ಅನೇಕ ರಚನಾತ್ಮಕ ಕಾರ್ಯಕ್ರಮದ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಕ್ಷೇತ್ರ ಹಿರಿಮೆಯ ಹಣೆಪಟ್ಟಿ ಕಟ್ಟಿದವರು.
2016ರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಅಧ್ಯಕ್ಷರಾಗಿ ಸಂಘಟನೆ ಮತ್ತಷ್ಟು ಬಲಗೊಳಿಸಿದ ನಾಗೇಶ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗರಡಿಯಲ್ಲೇ ಬೆಳೆದವರು.ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರಲ್ಲದೇ ಇತ್ತೀಚೆಗೆ ಬೆಳಗಾವಿಯಲ್ಲಿ ಲೋಕಸಭಾ ಸ್ಥಾನಕ್ಕೆ ಶೆಟ್ಟರ್ ಸ್ಪರ್ಧೆ ಮಾಡಿದಾಗ ಅಹರ್ನಿಶಿ ಅವರಿಗಾಗಿ ದುಡಿದವರು.
ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 1.50ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ಹಲವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದಾರೆ.ಆದರೆ ತಮ್ಮದೇ ಆದ ಒಂದುಗೂಡಿಸುವ,
ಎಲ್ಲರನ್ನೂ ವಿಶ್ವಾಸದಿಂದ ಕರೆದೊಯ್ಯುವ ವಿಶಿಷ್ಠ ವ್ಯಕ್ತಿತ್ವದ ಮೂಲಕ ಪಕ್ಷದಲ್ಲಿ ಯಶಸ್ವಿ ನಾಯಕನಾಗಿ ಹೊರ ಹೊಮ್ಮಿದ್ದಾರೆ.
ಕೊರೋನಾ ಸಂಕಷ್ಟದ ಕಾಲದಲ್ಲಿ ಸಮಾಜದ ಅನೇಕ ಜನರು ದಿನಗೂಲಿಗಳಾಗಿರುವುದನ್ನು ಅರಿತ ಕಲಬುರ್ಗಿ ಎಲ್ಲ ಘಟಕ ಪಂಚಾಯತದವರ ಮೂಲಕ 4500ಕೆ.ಜಿ .ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ಪೂರೈಸಿ ಅಕ್ಷರಶಃ
ಆಪತ್ಬಾಂಧವರಾಗಿದ್ದಾರೆ.
“ಸಮಾಜ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ಏನು ಮಾಡಿದೆ ಎಂಬುದು ಬಹಳ ಮುಖ್ಯ.ಅಧಿಕಾರ ಶಾಶ್ವತವಲ್ಲ. ಆದರೆ ಅವಳಿನಗರದ
ಅಭಿವೃದ್ದಿ ವಿಷಯದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಏನೇ
ಕಾರ್ಯಗಳನ್ನು ಮಾಡಿದರೂ ಜನರ ಶ್ರೇಯೋಭೀವೃದ್ಧಿ ಲಕ್ಷ್ಯದಲ್ಲಿಟ್ಟುಕೊಂಡು
ನಮ್ಮ ನಾಯಕರಾದ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಮಾರ್ಗದರ್ಶನದಲ್ಲಿ
ಮಾಡುವೆ”
*ನಾಗೇಶ ಕಲಬುರ್ಗಿ*