ಹುಬ್ಬಳ್ಳಿ : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೊದಲ ಹಂತವಾಗಿ ಇಂದು 35 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಭಾಗ್ಯವನ್ನು ನೀಡಿದ್ದು ಕಾರ್ಯಕರ್ತರ ಪಟ್ಟಿಯೂ ಇಷ್ಟರಲ್ಲೇ ಹೊರ ಬರುವುದು ಖಚಿತವಾಗಿದೆ.
ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಿಂದ ಮೂರನೇ ಬಾರಿ ದಿಗ್ವಿಜಯ ಸಾಧಿಸಿರುವ ಪ್ರಸಾದ ಅಬ್ಬಯ್ಯ ಅವರಿಗೆ ಮಹತ್ವದ ಕೊಳಚೆ ಅಭಿವೃದ್ಧಿ ಮಂಡಳಿ, ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಕಾಲಿಡದೇ ಹೋದರೂ ಗೆಲುವು ಸಾಧಿಸಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳೀ ಅಲ್ಲದೇ ಹಾನಗಲ್ ಕ್ಷೇತ್ರದಲ್ಲಿ ಎರಡನೇ ಬಾರಿ ಜಯ ದಾಖಲಿಸಿರುವ ಶ್ರೀನಿವಾಸ ಮಾನೆಯವರಿಗೆ ಉಪ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ಸ್ಥಾನ ದೊರೆತಿದೆ.
ರೋಣದ ಶಾಸಕ ಜಿ.ಎಸ್.ಪಾಟೀಲ, ಶಿವಲಿಂಗೇಗೌಡ, ಶರತ ಬಚ್ಚೇಗೌಡ, ಜಿ.ಟಿ.ಪಾಟೀಲ, ಮಹಾಂತೇಶ ಕೌಜಲಗಿ, ವಿಜಯಾನಂದ ಕಾಶಪ್ಪನವರ, ಬೇಳೂರ ಗೋಪಾಲಕೃಷ್ಣ, ಸತೀಶ ಸೈಲ ಸಹಿತ ಸುಮಾರು 35 ಶಾಸಕರು ಪ್ರಮುಖ ನಿಗಮಗಳ ಅಧ್ಯಕ್ಷಗಿರಿ ಪ್ರಕಟಿಸಲಿದ್ದು ಇನ್ನು ಪ್ರಮುಖ ಕಾರ್ಯಕರ್ತರ ಎರಡನೇ ಪಟ್ಟಿ ಹೊರ ಬೀಳಬೇಕಿದ್ದು ಧಾರವಾಡ ಜಿಲ್ಲೆಯಿಂದ ವಿನೋದ ಅಸೂಟಿ ಹಾಗೂ ಶಾಕೀರ ಸನದಿ ಹೆಸರು ಈ ಪಟ್ಟಿಯಲ್ಲಿವೆ ಎನ್ನಲಾಗಿದೆ.