*ಕರ್ನಾಟಕಕ್ಕೆ ಎರಡು ಚಿನ್ನ, 2 ಕಂಚು*
ಹುಬ್ಬಳ್ಳಿ : ನವಂಬರ್ 1ರಿಂದ 9 ರವರೆಗೆ ದಿಲ್ಲಿಯಲ್ಲಿ ನಡೆದ 4ನೇ ರಾಷ್ಟ್ರಮಟ್ಟದ ಪ್ಯಾರಾ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ 2023 ದೆಹಲಿಯ ಡಾಕ್ಟರ ಕರುಣಿ ಸಿಂಗ್ ಶೂಟಿಂಗ್ ರೇಂಜ್ನಲ್ಲಿ ನಡೆಯಿತು ಕರ್ನಾಟಕದಿಂದ ಒಟ್ಟು ಎಂಟು ಜನ ಪ್ಯಾರಾ ಶೂಟರ್ಸ್ ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಎರಡು ಚಿನ್ನ ಎರಡು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ವಿಶೇಷವೆಂದರೆ ಪದಕ ಪಡೆದವರು ಎಲ್ಲರೂ ವಾಣಿಜ್ಯ ರಾಜಧಾನಿ ಹುಬ್ಬಳ್ಳಿ ಯವರಾಗಿದ್ದು ದೀಪಾವಳಿಯ ಹೊಸ್ತಿಲಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ.
ಶ್ರೀ ಹರ್ಷ ದೇವರೆಡ್ಡಿ ಎರಡು ಚಿನ್ನ ಪದಕ ಪಡೆದರು.
10 ಮೀಟರ್ ಏರ ರೈಫಲ್ ಸ್ಟ್ಯಾಂಡಿಂಗ್ ಮಿಕ್ಸೆಡ್ SH2 (ಚಿನ್ನ ) ಮತ್ತು 10 ಮೀಟರ್ ಏರ ರೈಫಲ್ ಪ್ರೊನ್ ಮಿಕ್ಸೆಡ್ SH2 ಬಂಗಾರ ಗೆದ್ದರೆ,ರಾಕೇಶ್ ನಿಡಗುಂದಿ
50ಮೀಟರ್ ರೈಫಲ್ 3 ಪೊಸಿಷನ್ SH1 ಕಂಚು ತನ್ನದಾಗಿಸಿಕೊಂಡರು.
ತಂಡದ ವಿಭಾಗದಲ್ಲಿ ಒಂದು ಕಂಚಿನ ಪದಕ
50ಮೀಟರ್ ರೈಫಲ್ ಪ್ರೊನ್ ಮಿಕ್ಸೆಡ್ SH1 ರಲ್ಲಿ
ರಾಕೇಶ್ ನಿಡಗುಂದಿ,ಶಂಕರಲಿಂಗ ತವಳಿ ತಂದುಕೊಟ್ಟರು.
ಪದಕ ವಿಜೇತರಿಗೆ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಜೆ.ಪಿ. ನೋಟಿಯಲ್ ಅವರು ಪದಕ ವಿತರಿಸಿದರು.
ಕರ್ನಾಟಕದ ಪದಕ ಪಡೆದವರಿಗೆ ಕರ್ನಾಟಕ ರಾಜ್ಯ ಅಂಗವಿಕಲ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಎಂ ಮಹದೇವ್ ಹರ್ಷ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯವರೇ ಆದ ರವಿಚಂದ್ರ ಬಾಲೇಹೊಸೂರ್ ಅವರು ರಾಜ್ಯ ತಂಡದ ಮ್ಯಾನೇಜರ್ ಮತ್ತು ತರಬೇತುದರರಾಗಿ ಕಾರ್ಯನಿವಹಿಸಿದರು.
———–
*ನಮ್ಮ ಎಲ್ಲಾ ಓದುಗರಿಗೂ ಕನ್ನಡ ಧ್ವನಿ ವತಿಯಿಂದ ದೀಪಾವಳಿಯ ಹಾರ್ದಿಕ ಶುಭಾಷಯಗಳು*