*ಉದ್ಯಮ.ಶಿಕ್ಷಣ, ಸಮಾಜ ಸೇವೆ, ಆರೋಗ್ಯ, ಯೋಗ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಕಾಯಕಯೋಗಿಗೆ 60ರ ಸಂಭ್ರಮ*
ಹುಬ್ಬಳ್ಳಿ : ಇಡೀ ದೇಶದಲ್ಲೇ ಆಹಾರಧಾನ್ಯ, ಬೇಳೆಕಾಳುಗಳ ಆಹಾರಧಾನ್ಯಗಳ ಮಾರಾಟ, ವಹಿವಾಟು, ಸಂಸ್ಕರಣೆ, ಪ್ರೊಸೆಸಿಂಗ್,ಮತ್ತು ಕೈಗಾರಿಕೆಯಲ್ಲಿ ಹುಬ್ಬಳ್ಳಿಯ ಮುಥಾ ವಾಗಮಲ್ ಬುರಾಜಿ ( ಎಮ್ ಡಬ್ಲ್ಯೂಬಿ) ಸಮೂಹ ಎಂದರೆ ದೊಡ್ಡ ಹೆಸರು. ಅದಕ್ಕೊಂದು ಘನತೆ ಹಾಗೂ ಬ್ರ್ಯಾಂಡ್ ಆಗಿ ರೂಪಿಸಿದವರು ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ರಮೇಶ ಬಾಫಣಾ. ಕಳೆದ ಮೂರು ದಶಕಗಳಿಂದ ಉದ್ಯಮ, ಶೈಕ್ಷಣಿಕ, ಸಾಮಾಜಿಕ,ಧಾರ್ಮಿಕ, ಗೋ ಸೇವೆ, ಆರೋಗ್ಯ,ಯೋಗ, ಕ್ರೀಡಾ ಕ್ಷೇತ್ರಗಳಲ್ಲಿ ಎಮ್ ಡಬ್ಲ್ಯೂಬಿ (MWB)ಕೀರ್ತಿ ಬಾವುಟ ಹಾರುತ್ತಲೆ ಇದೆ.
1971ರಲ್ಲಿ ಕೇವಲ 3 ಜನ ಕಾರ್ಮಿಕರಿಂದ ಆರಂಭವಾದ ಈ ಸಂಸ್ಥೆ ಇಂದು ಸಾವಿರಕ್ಕೂ ಹೆಚ್ಚು ಜನರ ತುತ್ತಿನ ಚೀಲ ತುಂಬುವ ಜೊತೆಗೆ ಬದುಕಿಗೆ ಆಸರೆಯಾಗಿದ್ದು ಈ ಯಶಸ್ಸಿನ ಹಿಂದೆ ರಮೇಶ ಅವರ ಹಿರಿಯ ಸಹೋದರ ಉಕಚಂದ , ಕಿರಿಯ ಸಹೋದರ ಗೌತಮ ಅವರ ಪಾತ್ರವಿದೆ ’ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತು ಈ ಕುಟುಂಬದ ಪಾಲಿಗೆ ನೂರಕ್ಕೆ ನೂರು ಅನ್ವಯಿಸುತ್ತದೆ.ಬಾಫಣಾ ಕುಟುಂಬದ ಕುಡಿಗಳಾದ ರಾಕೇಶ, ಮುಖೇಶ, ಹಿತೇಷ, ಶ್ರೀಪಾಲ, ಮಗ ನಿಖಿಲ ಮೆಹತಾ, ಮಹಾವೀರ ಮುಂತಾದವರು ಕಳೆದ ಎರಡು ದಶಕಗಳಿಂದ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಾಫಣಾ ವ್ಯಾಪಾರ ರಂಗವಲ್ಲದೇ ಸಾಮಾಜಿಕ ಮತ್ತು ಧಾರ್ಮಿಕ ರಂಗದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು. ಬಡವರಿಗೆ ಸದಾ ನೆರವಿನ ಹಸ್ತ ನೀಡುವದಲ್ಲದೇ ತಮ್ಮ ಸಮೂಹದ ಸಿಬ್ಬಂದಿಗಳನ್ನು ಮನೆಯ ಮಕ್ಕಳಂತೆ ಕಾಣುವ ಮನೋಭಾವ ಹೊಂದಿದ್ದಾರೆ. ಶೀಲವಂತರ ಓಣಿ ವರಸಿದ್ದಿ ವಿನಾಯಕ ಮಂಡಳ, ಗಬ್ಬೂರಿನ ಆದಿನಾಥ ಜಿನ ಮಂದಿರ ದಾದಾವಾಡಿ ಟ್ರಸ್ಟ ನ್ಯೂ ಕಾಟನ್ ಮಾರ್ಕೆಟ್ನಲ್ಲಿರುವ ಹನುಮಾನ ಮಂದಿರ,ಹುಬ್ಬಳ್ಳಿ ಬಸವ ಕೇಂದ್ರ, ಶ್ರೀ ದೇವಿ ಮಂದಿರ ಟ್ರಸ್ಟ, ಶಿವಾಂಶಿ ಓಸ್ವಾಲ್ ಜೈನ, ಪಾಂಜರಪೋಳ ಸಂಘದ ಹೀಗೆ ಅನೇಕ ಸಂಘಟನೆಗಳ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿದ್ದಾರೆ.
ಜಗತ್ತಿನಲ್ಲಿ ಉಳ್ಳವರು ಅನೇಕರಿದ್ದಾರೆ. ಇಲ್ಲದವರು ಬಹಳಷ್ಟು ಜನರಿದ್ದಾರೆ. ಸೇವೆ ಮಾಡುವ ಸಾಮರ್ಥ್ಯವನ್ನು ದೇವರು ನಮಗೆ ನೀಡಿದ್ದಾನೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದು ನಮ್ಮ ಬದುಕಿನ ಸಾರ್ಥಕ್ಯಕ್ಕೂ ಕಾರಣವಾಗುತ್ತದೆ ಎಂಬ ಮಾತೊಂದೆ ಸಾಕು ಅವರ ವ್ಯಕ್ತಿತ್ವಕ್ಕೆ ಕೈಗನ್ನಡಿ ಹಿಡಿಯಲು.
ಸಂಘ ಪರಿವಾರದ ಹಿನ್ನೆಲೆಯಿರುವ ರಮೇಶ ಅವರು, ಲಾಲ ಕೃಷ್ಣ ಅದ್ವಾನಿ, ಪ್ರವೀಣ ಬಾಯಿ ತೊಗಾಡಿಯಾ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ನಿಕಟವರ್ತಿಗಳು.ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿರುವ ಇವರಿಗೆ ಸಂಸ್ಥೆಗೆ ನೂರಾರು ಪ್ರಶಸ್ತಿ ಅರಸಿ ಬಂದಿದೆ.
ಇಂದು ಬಾಫಣಾ ಅವರ 60ನೇ ಜನ್ಮದಿನದ ಸಂದರ್ಭದಲಲಿ ಬೃಹತ್ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಅನೇಕ ಮಠಾಧೀಶರು, ಗಣ್ಯರು ಪಾಲ್ಗೊಂಡು ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದು ,ಚಿಕಿತ್ಸೆ ಫಲಪ್ರದವಾಗಿ ಚೇತರಿಸಿಕೊಳ್ಳುತ್ತಿದ್ದು ಬೇಗ ಮತ್ತೆ ಜನಸೇವೆಯಲ್ಲಿ ತೊಡಗಿಕೊಳ್ಳುವಂತಾಗಲಿ ಭಗವಂತನಲ್ಲಿ ಪ್ರಾರ್ಥಿಸಿ, ಶುಭ ಹಾರೈಸಿದರು.