ಹೊಸದಿಲ್ಲಿ: ಕೊನೆಗೂ ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಕೂತೂಹಲಕ್ಕೆ ತೆರೆ ಬಿದ್ದಿದ್ದು, 27 ವರ್ಷಗಳ ಬಳಿಕ ಬಿಜೆಪಿ ಮಹಿಳಾ ನಾಯಕಿಗೆ ಮಣೆ ಹಾಕಿದ್ದು ಶಾಸಕಾಂಗ ಪಕ್ಷದ ನಾಯಕಿಯಾಗಿ ರೇಖಾ ಗುಪ್ತಾ ಆಯ್ಕೆಯಾಗಿದ್ದಾರೆ . ಉಪ ಮುಖ್ಯಮಂತ್ರಿಯಾಗಿ ಪ್ರವೇಶ ವರ್ಮಾ ನಿಯುಕ್ತಿಗೊಂಡಿದ್ದಾರೆ.
ನಾಳೆ ಇವರುಗಳು 12-30ಕ್ಕೆ ರಾಮಲೀಲಾ ಮೈದಾನದಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ.ಇಂದು ನಡೆದ 48 ಶಾಸಕರ ಸಭೆಯ ನಂತರ ಪಕ್ಷದ ವೀಕ್ಷಕರಾದ ರವಿಶಂಕರ ಪ್ರಸಾದ್, ಓಂ ಪ್ರಕಾಶ್ ಈ ವಿಷಯ ಪ್ರಕಟಿಸಿದ್ದಾರೆ.
ದಿನ.5ರಂದು ಫಲಿತಾಂಶ ಬಂದ 14 ದಿನದ ನಂತರ ದಿಲ್ಲಿ ಸಿಎಂ ಘೋಷಣೆಯಾಗಿದೆ. 50 ವರ್ಷದ ರೇಖಾ ಗುಪ್ತಾ ಆಯ್ಕೆ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಅಂತಿಮಗೊಂಡಿದ್ದರೂ ಸಂಜೆ ಶಾಸಕಾಂಗ ಸಭೆಯ ನಂತರ ಅಂತಿಮಗೊಂಡಿತು.
ಶಾಲಿಮಾರಭಾಗ ಶಾಸಕಿಯಾಗಿರುವ ರೇಖಾ ಗುಪ್ತಾ ಜೊತೆ ಕೇಜ್ರಿವಾಲ್ ಸೋಲಿಸಿದ ಪ್ರವೇಶ ವರ್ಮಾ, ಅನೀಶ್ ಸೂದ್, ವಿಜೇಂದರ್ ಗುಪ್ತಾ ಹೆಸರುಗಳು ಸಿಎಂ ರೇಸ್ ನಲ್ಲಿ ಬಂದಿದ್ದವು. ನಾಳೆ 6 ಸಚಿವರೂ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
*ಸ್ಥಳೀಯ ಮಹತ್ವದ ಸುದ್ದಿಗಳು*
1) ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಏರ್ಪಡಿಸಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಾಳೆ, ನಾಡಿದ್ದು ಹುಬ್ಬಳ್ಳಿಯಲ್ಲಿ ನಡೆಯಲಿದೆ. 20ರಂದು ಕೈಲಾಸ ಖೇರ್ ಹಾಗೂ 21ರಂದು ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ಆಕರ್ಷಣೆಯಾಗಿದೆ.
2)ಪ್ರಸಿದ್ಧ ಶ್ರೀ ಸಿದ್ಧಾರೂಢ ಸ್ವಾಮಿಯವರ ಕಥಾಮೃತ ಗ್ರಂಥದ ಶತಮಾನೋತ್ಸವ ಅಂಗವಾಗಿ ಇಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಶೋಭಾಯಾತ್ರೆಯು ಜರುಗಿತು.