*ಕೋಟಾ ಪೂಜಾರಿ ಪರಿಷತ್ ವಿಪಕ್ಷ ಧುರೀಣ*
ಬೆಂಗಳೂರು : ರಾಜ್ಯ ಬಿಜೆಪಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಅಲ್ಲದೆ ಹೊಸ ಪಡೆಯ ನೇಮಕದ ಹಿನ್ನೆಲೆಯಲ್ಲಿ ಭುಗಿಲೆದ್ದ ಅಸಮಾಧಾನಕ್ಕೆ ತೇಪೆ ಹಚ್ಚುವ ಮೊದಲ ಯತ್ನವಾಗಿ ವಿಧಾನ ಸಭಾ ವಿರೋಧ ಪಕ್ಷದ ಉಪನಾಯಕನಾಗಿ ಯಡಿಯೂರಪ್ಪ ಬಣದಿಂದ ಅಂತರ ಕಾಯ್ದುಕೊಂಡಿರುವ ಈ ಮೊದಲು ವಿರೋಧಿಸಿದ್ದ ಹುಬ್ಬಳ್ಳಿ
ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದರಿಗೆ ಮಣೆ ಹಾಕಿದೆ.
ಮೂರನೇ ಬಾರಿಗೆ ಅಭೂತಪೂರ್ವ ಗೆಲುವು ದಾಖಲಿಸಿದ ಬೆಲ್ಲದ ಹೆಸರು ಬೊಮ್ಮಾಯಿಗೂ ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ಅಲ್ಲದೆ ಈ ಬಾರಿ ವಿಪಕ್ಷ ಸ್ಥಾನಕ್ಕೂ ಪ್ರಬಲವಾಗಿ ಕೇಳಿ ಬಂದಿತ್ತು.
ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ನಿರೀಕ್ಷೆಯಂತೆ ಓಬಿಸಿ ಕೋಟಾದಡಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ ಪ್ರಕಾಶ (ಜೆ.ಪಿ) ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಿದ್ದಾರೆ.
ವಿಧಾನಸಭೆಯ ವಿಪಕ್ಷ ಉಪನಾಯಕರನ್ನಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ ವಿಪಕ್ಷ ಉಪ ನಾಯಕರನ್ನಾಗಿ ಸುನೀಲ ವಲ್ಯಾಪುರೆ, ವಿಧಾನಸಭೆಯ ಮುಖ್ಯ ಸಚೇತಕರಾಗಿ ಶಾಸಕ ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ನ ಮುಖ್ಯ ಸಚೇತಕರಾಗಿ ಎನ್.ರವಿಕುಮಾರ ಅವರನ್ನು ನೇಮಕ ಮಾಡಲಾಗಿದೆ.
ರವಿಕುಮಾರ್, ವಲ್ಯಾಪುರ , ಎಲ್ಲರೂ ಯಡಿಯೂರಪ್ಪ ಬಣದವರೇ ಆಗಿದ್ದಾರೆ.