16ರಂದು ಹಿಂದೂ ಚಿಂತನಾ ಸಭೆಯಲ್ಲಿ ಭಾಗಿ*
ಹುಬ್ಬಳ್ಳಿ: ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಹಿಂದೂ ಫೈರ್ ಬ್ರಾಂಡ್ ಡಾ. ಪ್ರವೀಣ ಭಾಯಿ ತೊಗಾಡಿಯಾ ಅವರು ಒಂದು ದಶಕದ( 2015) ನಂತರ ಹುಬ್ಬಳ್ಳಿಗೆ ದಿ.16ರಂದು ಆಗಮಿಸಲಿದ್ದು, ಗೋಕುಲ ರಸ್ತೆಯಲ್ಲಿನ ನಾಯಕಿ ಕನ್ವೆನ್ಷನ್ ಹಾಲ್ ನಲ್ಲಿ 11 ಗಂಟೆಗೆ ನಡೆಯಲಿರುವ ಹಿಂದೂ ಚಿಂತನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ಹಾಗೂ ರಾಷ್ಟ್ರೀಯ ಬಜರಂಗದಳದ ಹುಬ್ಬಳ್ಳಿ ಧಾರವಾಡ ಮಹಾನಗರ ಘಟಕ ಸ್ವಾಸ್ಥ್ಯ ಹಿಂದೂ, ಸುರಕ್ಷಿತ ಹಿಂದೂ ಸಂಕಲ್ಪದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಂಡು ಭಾಷಣ ಮಾಡಲಿದ್ದಾರೆ.
2015ರಲ್ಲಿ ವಾಣಿಜ್ಯ ರಾಜಧಾನಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ತೊಗಾಡಿಯಾ ಮೊದಲ ಬಾರಿಗೆ ಆಗಮಿಸುತ್ತಿದ್ದು, ಮೂರು ನೂರಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
16ರಂದೆ ಬೆಳಿಗ್ಗೆ ಆಗಮಿಸುವ ತೊಗಾಡಿಯಾ ಹುಬ್ಬಳ್ಳಿ ಕಾರ್ಯಕ್ರಮ ಮುಗಿಸಿ ಗದಗ, ಕೊಪ್ಪಳ, ಕಲಬುರ್ಗಿ ಮುಂತಾದೆಡೆ ಪ್ರವಾಸ ಕೈಗೊಂಡು ತದನಂತರ ಬೆಂಗಳೂರಿನ ಮಾರತಹಳ್ಳಿಯಲ್ಲಿ 21, 22ರಂದು ನಡೆವ ಪರಿಷತ್ತಿನ ರಾಷ್ಟ್ರೀಯ ಬೈಠಕ್ ನಲ್ಲಿ ಪಾಲ್ಗೊಳ್ಳುವರು.ತೊಗಾಡಿಯಾ ಅವರೊಂದಿಗೆ ರಾಷ್ಟ್ರೀಯ ವಕ್ತಾರ ಪ್ರದೀಪ್ ಗೌರ ಆಗಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ರಮೇಶ್ ಕುಲಕರ್ಣಿ, ಮುಖಂಡರಾದ ಗಣು ಜರತಾರಘರ, ಮೋಹನ್ ಬಿಲಾನಾ, ಅರ್ಜುನ್ ಸೇರಿದಂತೆ ಹಲವರು ಚಿಂತನಾ ಸಭೆ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.