*ದುನಿಯಾ ಸೂರಿ ನಿರ್ದೇಶನದ ಚಿತ್ರ*
ಹುಬ್ಬಳ್ಳಿ : ದುನಿಯಾ ಸೂರಿ ನಿರ್ದೇಶನದ, ತಮ್ಮ ಅಭಿನಯದ ‘ ಬ್ಯಾಡ್ ಮ್ಯಾನರ್ಸ್’ ಸಿನಿಮಾ ನ. 24ರಂದು ರಾಜ್ಯದ್ಯಾಂತ ಸುಮಾರು 300 ಚಿತ್ರ ಮಂದಿರದಲ್ಲಿ ತೆರೆ ಕಾಣಲಿದೆ ಎಂದು
ಮಂಗಳವಾರ ಇಲ್ಲಿನ ಪ್ರೆಸ್ ಕ್ಲಬ್ಬಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲಿಯುಗದ ಕರ್ಣ ಅಂಬರೀಶ್ ಪುತ್ರ ಹಾಗೂ ನಟ ಅಭಿಷೇಕ್ ಹೇಳಿದರು .
ಕೆ.ಎಂ.ಸುಧೀರ ಅವರ ಸ್ಟುಡಿಯೋ 18 ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಜಯಣ್ಣ ಫಿಲಂಸ್ ಕೈಜೋಡಿಸಿದ್ದು
ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಂದೆ ಅಂಬರೀಶ್ ಹಾಗೂ ಶಂಕರನಾಗ್ ಅವರೇ ಪ್ರೇರಣೆಯಾಗಿದ್ದಾರೆ. ಖಾಕಿ, ಸಿನಿಮಾ ಹಾಗೂ ಕಲಾವಿದರಿಗೂ ವಿಶೇಷ ನಂಟಿದೆ. ಈ ಹಿಂದೆ ಸಿನಿಮಾ ತೆರೆಕಾಣಬೇಕಿತ್ತು. ಪರದೆಯ ಮೇಲೆ ಉತ್ತಮವಾಗಿ ಮೂಡಿಬರಲಿ ಎಂಬ ಉದ್ದೇಶದಿಂದ ತಡವಾಗಿದೆ ಎಂದು ಅವರು ತಿಳಿಸಿದರು.
ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಮತ್ತು ಶೇಖರ್ ಎಸ್. ಅವರ ಛಾಯಾಗ್ರಹಣವಿದೆ. ಸಿನಿಮಾದಲ್ಲಿ 4-5 ಹಾಡುಗಳಿವೆ. ಟ್ರೈಲರ್ ಸಹ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಂಗಳೂರು, ಮೈಸೂರ, ಕನಕಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನಿಮಾಗೆ ಬೇಕಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಈ ಚಿತ್ರದಲ್ಲಿ ಡಿಂಪಲ್ ಬೆಡಗಿ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿಪ್ರತಾಪ್, ಮಿತ್ರಾ, ಮೋಹನ್ ಜುನೇಜಾ, ಪ್ರಶಾಂತ ಸಿದ್ದಿ ಸೇರಿ ದೊಡ್ಡ ತಾರಬಳಗ ಸಿನಿಮಾದಲ್ಲಿದೆ. ಕಲಾ ನಿರ್ದೇಶನ ಸುರೇಶ ಬಂಗನವರ, ಮೋಹನ ಕೆರೆ, ಸಾಹಸ, ನೃತ್ಯ ಸಂಯೋಜನೆ ರವಿವರ್ಮ, ನೃತ್ಯ ಸಂಯೋಜನೆ ಧನಂಜಯ್ ಬಿ. ಮಾಡಿದ್ದಾರೆ.
*ರಾಜಕೀಯಕ್ಕೆ ಬರಲ್ಲ*
ನಾನು ಯಾವೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಎಂದು ಸಂಸದೆ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ (Abishek Ambareesh) ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ತಂದೆಯವರು (Ambareesh) 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದರು.
ನಮ್ಮ ತಾಯಿಯವರು ತಾವು ಇರೋವರೆಗೆ ರಾಜಕೀಯಕ್ಕೆ ಬರಬೇಡ ಅಂತಾ ಹೇಳಿದ್ದಾರೆ. ಹೀಗಾಗಿ ನಾನು ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ. ಸೇವೆ ಮಾಡುವಂತಹ ಕೆಲಸಗಳಿದ್ದರೆ, ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದರು.
*ಉ.ಕ. ಆಶೀರ್ವಾದ ಇರಲಿ*
ಉತ್ತರ ಕರ್ನಾಟಕ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ. ಈ ಭಾಗದ ಜನರ ಆಶೀರ್ವಾದ ತಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ. ಇಡೀ ಸಿನಿಮಾ ಕರ್ನಾಟಕದಲ್ಲಿ ಶೂಟಿಂಗ್ ಆಗಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕದ ಅನೇಕ ಕಲಾವಿದರು ಇದ್ದಾರೆ ಎಂದರು.
ಸಿನಿಮಾ ಫ್ಯಾನ್ ಇಂಡಿಯಾ ಮಾಡ್ತೀವಿ ಅಂದ್ರೆ ಕಷ್ಟ. ಫ್ಯಾನ್ ಇಂಡಿಯಾಗಿಂತ ಒಳ್ಳೆ ಸಿನಿಮಾ ಮಾಡಬೇಕು. ಸಿನಿಮಾ ನೋಡಿದ ಮೇಲೆ ಫ್ಯಾನ್ ಇಂಡಿಯಾ ಸಿನಿಮಾನಾ ಇದು ಎಂದು ಜನ ಡಿಸೈಡ್ ಮಾಡ್ತಾರೆ. ಸೂರಿ ಅವರಿಗೆ ಅವರದೆ ಅಂತ ಪ್ರೇಕ್ಷಕ ವರ್ಗವಿದೆ. ಹೀಗಾಗಿ ಅವರ ಜೊತೆ ಸಿನಿಮಾ ಮಾಡಿರೋದು ಬಹಳ ಖುಷಿ ಇದೆ. ಸಿನಿಮಾ ಟ್ರೈಲರ್ ನೋಡಿದ ಮೇಲೆ ಕೆಲವರು ಅಭಿಯಲ್ಲಿ ಅಂಬರೀಷ್ ಅವರನ್ನು ಕಾಣ್ತೀದೀವಿ ಅಂತೀದಾರೆ ಎಂದು ಅವರು ಹೇಳಿದರು.
ಡಾ.ರಾಜಕುಮಾರ ಕುಟುಂಬದ ನಿಕಟವರ್ತಿ ,ಅನೇಕ ಕಲಾವಿದರೊಂದಿಗೆ ಬಾಂಧವ್ಯ ಹೊಂದಿರುವ ಶಿವಾನಂದ ಮುತ್ತಣ್ಣವರ ಅಭಿಷೇಕ್ ಗೆ ಕಂಬಳಿ ಹೊದೆಸಿ ಗೌರವಿಸಿದರು.