ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಮಾಫಿ ಸಾಕ್ಷಿ ಬಸವರಾಜ ಮುತ್ತಗಿ ಕುರಿತ ತೇಜೋವಧೆಯ ಸುದ್ದಿ ಪ್ರಸಾರಕ್ಕೆ ನ್ಯಾಯಾಲಯ ತಡೆ ನೀಡಿ ಆದೇಶಿಸಿದೆ.

ಅಸಲಿ ಸುದ್ದಿ ಸೇರಿದಂತೆ ಒಟ್ಟು ಆರು ಯೂಟೂಬ್ ಗಳು, ಪತ್ರಿಕೆಗಳಲ್ಲಿ ಮುದ್ರಣ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೆ, ಪ್ರತಿಕ್ರಿಯೆ, ವಾಹಿನಿಗಳಲ್ಲಿ ಆಡಿಯೋ , ವಿಡಿಯೋಗಳ ಮೂಲಕ ತೇಜೋವಧೆಯ
ಸುದ್ದಿ ಪ್ರಸಾರಕ್ಕೆ ಧಾರವಾಡದ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಸೋಮವಾರ ತಡೆಯಾಜ್ಞೆ ನೀಡಿದೆ.
ಇದರಿಂದ ಮಾಫಿ ಸಾಕ್ಷಿ ಆದ ಬಸವರಾಜ ಮುತ್ತಗಿ ಅವರಿಗೆ ನ್ಯಾಯಾಲಯದ ಆದೇಶ ನಿರಾಳ ತಂದಿದೆ.



