*ಆರು ದಿನವಾದರೂ ಪತ್ತೆಯಾಗದ ಗಲಾಟೆ ಮಂಜ*
ಘಟನೆ ಸುತ್ತ ಸಂಶಯದ ಹುತ್ತ*
ಧಾರವಾಡ : ನೆರೆಯ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನೀರಲಗಾ ಮೂಲದ ರೌಡಿಶೀಟರ್ ಮಂಜುನಾಥ ಬೇಕಣಿ ಉರ್ಪ ರೌಡಿ ಮಂಜಾ ಕುಡಿದ ಅಮಲಿನಲ್ಲಿ ಮಾಡಿದ ಗಲಾಟೆ ಹಾಗೂ ಖಾಕಿ ಸಿಬ್ಬಂದಿಯೊಬ್ಬನ ಮೇಲೆ ನಡೆಸಿದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪಿಎಸ್ಐ ಅಮಾನತುಗೊಳಿಸಿ ಎಂಟು ಪೊಲೀಸರನ್ನು ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಿ ಎಸ್ ಪಿ ಕೈ ತೊಳೆದುಕೊಂಡಿದ್ದು, ಆದರೆ ಇದುವರೆಗೆ ಆರೋಪಿ ನಾಪತ್ತೆಯಾಗಿದ್ದರೂ ತನಿಖಾಧಿಕಾರಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಹೋಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಕಳೆದ ರವಿವಾರ ರಾತ್ರಿ ಹಳಿಯಾಳ ಪಟ್ಟಣದ ಮೌರ್ಯ ಬಾರ್ ಆಂಡ್ ರೆಸ್ಟೋರೆಂಟ್ ಬಳಿ ಕುಡಿದ ಅಮಲಿನಲ್ಲಿದ್ದ ರೌಡಿ ಮಂಜನ ಗಲಾಟೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಪಿ ಎಸ್ ಐ ಬಸವರಾಜಗೆ ರೌಡಿ ಅರೆಸ್ಟ್ ಮಾಡದಂತೆ ಆದೇಶ ನೀಡಿದ್ದ ಸಿಪಿಐ ಜೈಪಾಲ್ ಪಾಟೀಲ್ ಹಾಗೂ ಡಿವೈಎಸ್ಪಿ ಶಿವಾನಂದ ಮದರಖಂಡಿಯವರ ಮುಂತಾದ ಹಿರಿಯ ಅಧಿಕಾರಿಗಳ ನಿರ್ಲಕ್ಷಕ್ಕೆ ಈಗ ಅದೇ ಕಿರಿಯ ಅಧಿಕಾರಿ ಬಲಿಪಶುವಾಗಬೇಕಾಗಿ ಬಂದಿದೆ.
ಘಟನಾ ಸ್ಥಳದಿಂದ ಕೇವಲ ಮೂರು ನೂರು ಮೀಟರ್ ದೂರದಲ್ಲಿ ಕಚೇರಿ ಇದ್ದು ರೌಡಿ ಗಲಾಟೆ ಮಾಡುತ್ತ ಒಂದುವರೆ ಗಂಟೆ ಕಾಲ ಪೊಲೀಸರಿಗೆ ಬೈದರೂ ಸ್ಥಳಕ್ಕೆ ಬಾರದ ಸಿಪಿಐ ರೌಡಿ ವಶಕ್ಕೆ ಪಡೆಯದಂತೆ ಯಾಕೆ ಸೂಚಿಸಿದರು ಎಂಬುದು ನಿಗೂಢ ರಹಸ್ಯವಾಗಿದೆ. ಇದರಲ್ಲಿ ಈ ಹಿಂದೆ ಇಲ್ಲಿಯೇ ಕೆಲಸ ಮಾಡಿ ಈಗ ಈ ಘಟನೆ ನಡೆದ ದಿನದಿಂದ ಹಳಿಯಾಳದಲ್ಲೇ ಓಡಾಡುತ್ತಿರುವ ಅದೇ ಜಿಲ್ಲೆಯ ಬೇರೆ ತಾಲೂಕಿನ ಪಿಎಸ್ಐ ಒಬ್ಬರ ಕೈವಾಡದ ಶಂಕೆ ಇದೆ ಎಂಬ ಮಾತುಗಳು ಠಾಣೆಯ ಅಂಗಳದಿAದಲೇ ಕೇಳಿ ಬರುತ್ತಿದೆ.
ಪಿಎಸ್ಐ ಅಲ್ಲದೇ ಕಚೇರಿ ಸಿಬ್ಬಂದಿ ಫಟನೆ ಸೂಕ್ಷ್ಮತೆ ಬಗ್ಗೆ ಮಾಹಿತಿ ನೀಡಿದ್ದರೂ ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ ನಂದೀಶ್ ಹಾಗೂ ಅಶೋಕ್ ಅವರನ್ನು ಹಲ್ಲೆ ನಡೆಸಿದ್ದು, ಈಗ ಕರ್ತವ್ಯ ಲೋಪದಡಿ ಜಿಲ್ಲಾ ಪೊಲೀಸ್ ಇಲಾಖೆ ಪಿಎಸ್ಐ ಮೇಲೆ ಕ್ರಮ ಕೈಗೊಂಡಿದ್ದು, ತನಿಖೆ ಆರಂಭಗೊಂಡಿದೆ.ಆದರೆ ಘಟನೆ ನಡೆದು ಆರು ದಿನಗಳಾದರೂ ಇದುವರೆಗೆ ರೌಡಿ ಮಂಜ ಇದುವರೆಗೆ ನಾಪತ್ತೆಯಾಗಿದ್ದು, ಯಾಕೆ ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಸಹ ಯಕ್ಷ ಪ್ರಶ್ನೆಯಾಗಿದೆ.
ರೌಡಿ ಮಂಜನ ಮೇಲೆ ನಾಲ್ಕೈದು ಪ್ರಕರಣಗಳಿದ್ದು, ಗಲಾಟೆ ಪ್ರಕರಣ ಇದೀಗ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಯಲ್ಲಿದ್ದು, ಈತನ ಮೇಲೆ ಕ್ರಮ ಕೈಗೊಳ್ಳಲು ತನಿಖಾಧಿಕಾರಿಗಳು ಯಾಕೆ ಹೇಳಿದರು, ಮಾರ್ಗದರ್ಶನ ಮಾಡಬೇಕಾದವರು ಯಾವುದಾದರೂ ಒತ್ತಡಕ್ಕೆ ಸಿಲುಕಿದರೋ ಎಂಬ ಮೇಲ್ನೋಟಕ್ಕೆ ಅಂಶಗಳನ್ನು ಖಡಕ್ ಎಸ್ ಪಿ ಎಂ.ಎನ್.ದೀಪನ್ ಪರಿಶೀಲಿಸಿದಲ್ಲಿ ಅಸಲಿ ಸೂತ್ರಧಾರನ ಜಾತಕ ಹೊರ ಬರುವುದು ನಿಶ್ಚಿತ . ಕಿರಿಯ ಅಧಿಕಾರಿಗಳನ್ನು ಬಲಿ ಕೊಡುವ ಚಾಳಿ ಇಲಾಖೆಯಲ್ಲಿ ಹೊಸದಲ್ಲ ಎಂಬ ಮಾತಂತೂ ಈ ಪ್ರಕರಣದಲ್ಲಿ ಮತ್ತೆ ಸಾಭೀತಾಗಿದೆ.




