ಜಾಗತಿಕವಾಗಿ 2ನೇ ಸ್ಥಾನಕ್ಕೇರಿದ ಭಾರತ : ಜೋಶಿ
*ಸರ್ಕಾರಿ ಕಟ್ಟಡಗಳಲ್ಲಿ ಸೌರ ಮೇಲ್ಛಾವಣಿ ಶೇ.80 ಪ್ರಗತಿ*
ಹೊಸದಿಲ್ಲಿ : ಸೌರಶಕ್ತಿ ಉತ್ಪಾದನೆಯಲ್ಲಿ ಭಾರತ 2025ರಲ್ಲಿಯೇ ಅಮೇರಿಕಾವನ್ನು ಹಿಂದಿಕ್ಕಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಮನೆ ಮೇಲ್ಛಾವಣಿ ಘಟಕ, ಕೃಷಿ ಪಂಪ್ ಸೌರೀಕರಣದಿಂದ ಹಿಡಿದು ಬೃಹತ್ ಸೌರ ಪಾರ್ಕ್ ಗಳ ಸ್ಥಾಪನೆವರೆಗೂ ಭಾರತ ಮುಂಚೂಣಿಯಲ್ಲಿದ್ದು, ವಿಶ್ವದ 2ನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದಿದ್ದಾರೆ
2025ರ ಸೌರ ಶಕ್ತಿ ಸಾಮರ್ಥ್ಯದಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದ ಅಮೆರಿಕವನ್ನು ಮೀರಿಸಿದ್ದು, ವಾರ್ಷಿಕ ಸೇರ್ಪಡೆಯಲ್ಲಿ ಸೌರ ಶಕ್ತಿ ಮಾರುಕಟ್ಟೆಯನ್ನು ವಿಸ್ತೃತವಾಗಿಸಿದೆ. 2025ರಲ್ಲಿ ಭಾರತ 37 GW ಗಿಂತ ಹೆಚ್ಚಿನ ಸೌರಶಕ್ತಿ ಸೇರ್ಪಡೆಯನ್ನು ದಾಖಲಿಸಿದ್ದು, ಇದು ಅಮೆರಿಕದ 34 GW ಕ್ಕಿಂತ ಅಧಿಕ ಸಾಮರ್ಥ್ಯವನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.
ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದ್ದು, ಅಂತರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (IRENA) ವರದಿ ಪ್ರಕಾರ ಅಮೆರಿಕವನ್ನು ಹಿಂದಿಕ್ಕಿ ಜಾಗತಿಕವಾಗಿ 2 ನೇ ಸ್ಥಾನಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ
ಸರ್ಕಾರಿ ಕಟ್ಟಡಗಳ ಮೇಲೆ ಸೌರ ಮೇಲ್ಛಾವಣಿ ಅಳವಡಿಕೆಯಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜೋಶಿ ದೆಹಲಿಯಲ್ಲಿ ಗುರುವಾರ ನಡೆದ ವಿವಿಧ ಸಚಿವಾಲಯ ಮತ್ತು ಸಂಸ್ಥೆಗಳ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಸಚಿವರು, ಸರ್ಕಾರಿ ಕಟ್ಟಡಗಳ ಸೌರ ಮೇಲ್ಛಾವಣಿಯಿಂದ 855 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸಾಧಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಕಟ್ಟಡಗಳ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆ ಪ್ರಗತಿ ಪರಿಶೀಲಿಸಿ, ಶೇ.80ರಷ್ಟು ಸೌರ ಅಳವಡಿಕೆ ಗುರಿ ಸಾಧಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.




