*ತೀವ್ರ ವಿರೋಧಕ್ಕೆ ಮಣಿದ ಪ್ರಸಾರ ಭಾರತಿ*
ಧಾರವಾಡ: ಧಾರವಾಡ ಆಕಾಶವಾಣಿ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಆದೇಶಿಸಿರುವುದಕ್ಕೆ ವ್ಯಾಪಕ ವಿರೋಧಕ್ಕೆ ಕೇಂದ್ರ ಸರ್ಕಾರ ಮಣಿದಿದೆ.
ಧಾರವಾಡ ಆಕಾಶವಾಣಿ ಸುದ್ದಿ ಘಟಕ ಧಾರವಾಡದಲ್ಲೇ ಮುಂದರಿಸಲು ಪ್ರಸಾರ ಭಾರತಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಅಧಿಕೃತ ಆದೇಶ ದಿ.22ರಂದು ಆದೇಶ ಹೊರಡಿಸಿದ್ದಾರೆ.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಮಂಗಳವಾರ ಸಭೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿ
ನಾಳೆ 23ರಂದು ಬೆಳಗ್ಗೆ 10.30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಆಕಾಶವಾಣಿ ಎದುರು ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದು, 18 ಜಿಲ್ಲೆಗಳ ಸಂಸದರು, ಶಾಸಕರಿಗೆ ಪತ್ರದ ಮೂಲಕ ಮನವಿ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಆದೇಶ ರದ್ದುಪಡಿಸಲು ಆಗ್ರಹಿಸುವುದು ಮತ್ತು ಮುಂದಿನ ಹೋರಾಟಕ್ಕೆ ತೀರ್ಮಾನಿಸಲಾಗಿತ್ತು.




