ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕೇಶ್ವಾಪುರ ರಾಮನಗರ ಪ್ರದೇಶದ ಪ್ರಭಾವಿ ಯುವ ಮುಖಂಡ ಸಂತೋಷ್ ಚಲವಾದಿ ನೇಮಕಗೊಂಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆದೇಶದಂತೆ ಸಂತೋಷ್ ಚಲವಾದಿಯವರ ನೇಮಕವನ್ನು ಮಹಾನಗರ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ ಪ್ರಕಟಿಸಿದ್ದಾರೆ.
ಕೂಡಲೇ ಅಧಿಕಾರ ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹೇಳಿದ್ದಾರೆ.
ಅಪ್ರತಿಮ ಸಂಘಟಕರಾಗಿರುವ ಅಲ್ಲದೇ ರಾಮನಗರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮ ಪತ್ನಿ ಶೃತಿ ಚಲವಾದಿ ಪ್ರತಿನಿಧಿಸುವ ಐವತ್ತೆಂಟನೇ ವಾರ್ಡ್ ನ್ನು ಮಾದರಿ ಎನ್ನುವಂತೆ ರೂಪಿಸಿದ ಕೀರ್ತಿ ಇವರದ್ದಾಗಿದೆ.
ಸರ್ವ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಣೇಶೋತ್ಸವ, ಕ್ರಿಸ್ಮಸ್, ರಂಜಾನ್ ಸಹಿತ ಎಲ್ಲಾ ಸಮುದಾಯದ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಅಕ್ಷರಶಃ ಭಾವೈಕ್ಯತೆಯ ಬಂಧನ ಬೆಸೆದು ಮನೆ ಮಾತಾಗಿದ್ದಾರೆ.
ಪಕ್ಷ ನೀಡಿದ ಜವಾಬ್ದಾರಿಯನ್ನು ಎಲ್ಲಾ ರಾಜ್ಯಮಟ್ಟದ ಹಾಗೂ ಸ್ಥಳೀಯ ಪ್ರಮುಖ ಮುಖಂಡರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಮಾಡುವ ವಿಶ್ವಾಸವನ್ನು ‘ಕನ್ನಡ ಧ್ವನಿ’ ನ್ಯೂಸ್ ಪೋರ್ಟಲ್ ಜೊತೆ ಮಾತನಾಡುತ್ತಾ ಸಂತೋಷ್ ಚಲವಾದಿ ವ್ಯಕ್ತಪಡಿಸಿದ್ದಾರಲ್ಲದೇ ತಮ್ಮ ನೇಮಕಕ್ಕೆ ಕಾರಣರಾದ ಎಲ್ಲ ಮುಖಂಡರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.




