ಧಾರವಾಡ: ಇಲ್ಲಿನ ಧಾರವಾಡ ವಕೀಲರ ಸಂಘಕ್ಕೆ ಇದೇ ದಿ.25 ರಂದು ಚುನಾವಣೆ ಜರುಗಲಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ, ಕಾರ್ಯಕಾರಿ ಸಮಿತಿಯ ಸ್ಥಾನ ಮತ್ತು 1 ಮಹಿಳಾ ಪ್ರತಿನಿಧಿ ಸೇರಿದಂತೆ ಒಟ್ಟು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಸಿ.ಎಸ್. ನೇಗಿನಹಾಳ, ಬಿ.ಎಸ್. ಘೋಡಸೆ ಮತ್ತು ಅಶೋಕ ದೊಡ್ಡಮನಿ ಸ್ಪರ್ಧಿಸಿದ್ದಾರೆ.

ನೇಗಿನಹಾಳ ಮತ್ತು ದೊಡ್ಡಮನಿ ಇದೇ ಪ್ರಥಮ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರೆ, ಘೋಡಸೆ ಅವರು ಈ ಹಿಂದೆ ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಒಂದುಉಪಾಧ್ಯಕ್ಷ ಸ್ಥಾನಕ್ಕೆ ಸಂಗಮೇಶ ಬನ್ನೂರ, ಶ್ರೀಕಾಂತ ಕ್ಯಾತಪ್ಪನವರ, ಎಸ್.ಬಿ.ರೋಣದ ಮತ್ತು ಶ್ರೀಕಲಾ ರೇವಣಕರ ಅಭ್ಯರ್ಥಿಗಳಾಗಿದ್ದಾರೆ.ಪ್ರಧಾನ ಕಾರ್ಯದರ್ಶಿ
ಸ್ಥಾನಕ್ಕೆ ಸುನೀಲ ಗುಡಿ ಮತ್ತು ಸಚಿನ್ ಕುಲಕರ್ಣಿ ಅವರು ಹಾಗೂ ಖಜಾಂಚಿ ಹುದ್ದೆಗೆ ಸುವರ್ಣ ಅಂಟಿನ ಮತ್ತು ರೂಪಾ ಕೆಂಗಾನೂರ ಕಣದಲ್ಲಿದ್ದಾರೆ.
ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬಸವರಾಜ ಪೂಜಾರ, ಬಿ.ಎಂ.ಬೆಳಲದವರ, ಹೇಮಂತ ಕಣಕಿಕೊಪ್ಪ ಮತ್ತು ಎಂ.ಎನ್.ತಾರಿಹಾಳ ಅಭ್ಯರ್ಥಿಗಳಾಗಿದ್ದಾರೆ.
ಕಾರ್ಯಕಾರಿ ( ಸಾಮಾನ್ಯ) ಸದಸ್ಯ ಸ್ಥಾನಗಳಿಗೆ ಬಸವರಾಜ ಸುಂಕದ, ಗಂಗಾಧರ ಜಾವೂರ, ಶಕ್ತಿ ಹಿರೇಮಠ, ಎಸ್.ಎಸ್.ಕರಗುದರಿ, ಮಂಜುನಾಥ ಮಡಿವಾಳರ, ಸದಾಶಿವ ಪರೀಟ, ಉಳವಪ್ಪ ಉಳವಣ್ಣವರ, (1 ಮಹಿಳಾ ಸ್ಥಾನ) ರಾಧಾ ಭಜಂತ್ರಿ, ಚೈತ್ರಾ ದಂಡಿನ, ಸುಚಿತ್ರಾ ಕುರುಬರ ಸ್ಪರ್ಧಿಗಳಾಗಿದ್ದು,
ಒಂದು ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ಮಧು ಕಡಕೋಳ ಮತ್ತು ಶ್ರೀದೇವಿ ಕೊಲ್ಹಾರ ಅಭ್ಯರ್ಥಿಗಳಾಗಿದ್ದಾರೆ.
ಸಿವಿಲ್ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ, ಲಾ ಚೇಂಬರ್ ಸೌಲಭ್ಯ ಸೇರಿದಂತೆ ಹಲವಾರು ಕೆಲಸಗಳು ಸಂಘದ ಪದಾಧಿಕಾರಿಗಳಿಂದ ಆಗಬೇಕಿದೆ.
ಈ ದಿಸೆಯಲ್ಲಿ ನೂತನ ಮಂಡಳಿ ಆದ್ಯತೆ ನೀಡಬೇಕಿದೆ.
ಕಳೆದ ಎರಡು ತಿಂಗಳುಗಳಿಂದ ಅಭ್ಯರ್ಥಿಗಳು ಸದಸ್ಯರ ಮನೆ- ಕಚೇರಿಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಅಲ್ಲದೇ ಪ್ರತಿದಿನ ನ್ಯಾಯಾಲಯದಲ್ಲಿ ತಮಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.
ಈ ಮಧ್ಯೆ ಜಾತಿ ಲೆಕ್ಕಾಚಾರ ಕೂಡ ಸಂಘದ ಚುನಾವಣೆಯಲ್ಲಿ ಆಂತರ್ಯದಲ್ಲಿ ಹರಿದಾಡುತ್ತಿದ್ದು, ಇವೆಲ್ಲವನ್ನು ಮೀರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಚಿಂತನೆ ಸದಸ್ಯರಲ್ಲಿದೆ.
*ಸಾವಿರಕ್ಕೂ ಹೆಚ್ಚು ಸದಸ್ಯರು:* ವಕೀಲರ ಸಂಘದ ಎರಡು ವರ್ಷಗಳ ಅವಧಿಗೆ ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ
1434 ಸದಸ್ಯರು ಮತದಾನದ ಹಕ್ಕು ಹೊಂದಿರುವರು.
ಸಂಘದ ಕಟ್ಟಡದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ಚುನಾವಣೆ ಜರುಗಲಿದ್ದು, 6 ಗಂಟೆಯಿಂದ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಸತೀಶ ರಾಯಚೂರ ಮತ್ತು ಸಹಾಯಕ ಚುನಾವಣಾಧಿಕಾರಿ ಬಸವರಾಜ ಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



