ಧಾರವಾಡ: ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾ ಘಟಕದ ಮಹಿಳಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಗೌಡರ ಅವರನ್ನು ಸಂಘಟನೆಯ ನಿಯಮಾನುಸಾರ ತಕ್ಷಣದಿಂದಲೇ ಹುದ್ದೆಯಿಂದ ಹಾಗೂ ಸಂಘಟನೆಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಕರವೇ ರಾಜ್ಯ ಪ್ರಧಾನ ಮಹಿಳಾ ಘಟಕದ
ಕಾರ್ಯದರ್ಶಿ ಸಹನಾ ಶೇಖರ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಅವರು ಸಂಘಟನಾತ್ಮಕ ಜವಾಬ್ದಾರಿಗಳಿಂದ ದೂರ ಉಳಿಯುವುದು, ಹೊಣೆಗಾರಿಕೆಗೆ ತಕ್ಕ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವುದು ಹಾಗೂ ಸಂಘಟನೆ ಬಲವರ್ಧನೆಗೆ ಅಗತ್ಯವಾದ ಬದ್ಧತೆ ತೋರಿಸದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂಘಟನೆಯನ್ನು ಕಟ್ಟದವರನ್ನು ಸಂಘಟನೆಯಲ್ಲಿ ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬ ನಿಲುವಿನಡಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಕ್ಷಣದಿಂದ ಮಲ್ಲಮ್ಮ ಗೌಡರ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಗೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಸಂಘಟನೆಯ ಹೆಸರು, ಹುದ್ದೆ, ಗುರುತು ಅಥವಾ ಪ್ರಭಾವವನ್ನು ಇನ್ನು ಮುಂದೆ ಎಲ್ಲಿಯೂ ಬಳಸಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗುತ್ತದೆ. ಈ ಸೂಚನೆಯನ್ನು ಉಲ್ಲಂಘಿಸಿ ಕರವೇ ಹೆಸರನ್ನು ಬಳಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.



