*ಶಶಿಕುಮಾರ್ ದಾವಣಗೆರೆ ಪೂರ್ವ ವಲಯ ಐಜಿಪಿ ನೇಮಕ ಸಾಧ್ಯತೆ*
ಹುಬ್ಬಳ್ಳಿ: ರಾಜ್ಯ ಪೊಲೀಸ್ ಇಲಾಖೆಯ ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿದ್ದ 2009ನೇ ಬ್ಯಾಚ್ ಐಪಿಎಸ್ ಅಧಿಕಾರಿ ಭೂಷಣ್ ಗುಲಾಬರಾವ್ ಬೋರಸೆ ಅವರನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತರಾಗಿ ನಿಯುಕ್ತಿ ಮಾಡಲಾಗಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ವರ್ಗಾವಣೆ ಗುಸು ಗುಸು ಇದ್ದುದು ಕೊನೆಗೂ ಇಂದು ಅಧಿಕೃತವಾಯಿತು.

ಹುಬ್ಬಳ್ಳಿ ಧಾರವಾಡ ಕಮೀಷನರ್ ರೇಸ್ ನಲ್ಲಿ ಹಲವರಿದ್ದರೂ ರಾಜ್ಯ ಸರ್ಕಾರ ಅತ್ಯಂತ ಸೂಕ್ಷ್ಮ ಹಣೆಪಟ್ಟಿಯ ಅವಳಿ ನಗರಕ್ಕೆ ನೇರ ಐಪಿಎಸ್ ಹಾಕಲೇಬೇಕು ಎಂಬ ನಿರ್ಧಾರಕ್ಕೆ ಬಂದು ಬೋರಸೆ ಅವರ ನೇಮಕ ಮಾಡಿದೆ ಎಂದು ಹೇಳಲಾಗಿದೆ.
ಡಾ. ಬಿ.ಆರ್. ರವಿಕಾಂತೇಗೌಡ,
ಐಜಿಪಿ, ಪೂರ್ವ ವಲಯ ,ದಾವಣಗೆರೆ ಇವರು ದಿ.31ರಂದು ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಶಶಿಕುಮಾರ್ ನೇಮಕ ಆಗುವುದೆಂದು ವದಂತಿ ದಟ್ಟವಾಗಿದೆ.
ಬೆಳಗಾವಿಯ ಬೋರಸೆ ಅವರ ಸ್ಥಾನಕ್ಕೆ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ನೇಮಕ ಮಾಡಿದೆ.
ಆರ್. ಚೇತನ್, ಐಪಿಎಸ್ (2010) – ಕಾಯುವಿಕೆಯಲ್ಲಿದ್ದ ಅಧಿಕಾರಿಯಾಗಿದ್ದ ಇವರನ್ನು ಡಿಐಜಿ, ಪಶ್ಚಿಮ ವಲಯ, ಮಂಗಳೂರು ಹುದ್ದೆಗೆ ನೇಮಿಸಲಾಗಿದೆ. ಗದಗ ಎಸ್ಪಿ ರೋಹನ್ ಜಗದೀಶ್, ಐಪಿಎಸ್ (2019) – ಇವರನ್ನು ಬೆಂಗಳೂರು ದಕ್ಷಿಣ ಜಿಲ್ಲೆ (ರಾಮನಗರ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಮಂಗಳೂರು ಡಿಸಿಪಿ ಮಿಥುನ್ ಎಚ್.ಎನ್. ಗದಗ್ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ವರ್ಗಾವಣೆ ಮಾಡಲಾಗಿದೆ.




