ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಸುಪಾರಿ ಹತ್ಯೆ :
*24ಗಂಟೆಯೊಳಗೆ ಬಂಧಿಸಿದ ಪೊಲೀಸರು*
ಮುಂಡಗೋಡ : ಶುಕ್ರವಾರ ರಾತ್ರಿ ನಡೆದ ಜಮೀರ ಅಹ್ಮದ ದರ್ಗಾವಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5 ಜನ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಮುಂಡಗೋಡ ತಾಲೂಕಿನ ಇನ್ನೋರ್ವ ರೌಡಿ ಶೀಟರ್ ಮಂಜುನಾಥ ಕಾಜಗಾರ, ಶ್ರೀಕಾಂತ ಕೀರಣ್ಣನವರ್, ಧಾರವಾಡ ಮೂಲದ ಮಂಜುನಾಥ ಬೆಳಗಾಂವ, ಅಭಿಷೇಕ ಬಡಶೆಟ್ಟಿ, ದೀಪಕ ನವಲೆ ಬಂಧಿಸಲ್ಪಟ್ಟಿರುವ ಯರಾಗಿದ್ದಾರೆ.

ಆರೋಪಿತರು ಕೃತ್ಯಕ್ಕೆ ಬಳಿಸಿದ ಎರಡು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಆರು ಸಜೀವ ಗುಂಡುಗಳನ್ನು ಆರೋಪಿತರಿಂದ ವಶಪಡಿಸಿಕೊಳ್ಳಲಾಗಿದೆ. ಒಂದನೇ ಆರೋಪಿತ ಮಂಜುನಾಥ ಕಾಜಗಾರ ಈತನು ಮೊದಲಿನಿಂದಲೂ ಮೃತನಾದ ಜಮೀರಅಹ್ಮದ ತಂದೆ ನಜೀರಅಹ್ಮದ ದರ್ಗಾವಾಲೆ ಈತನೊಂದಿಗೆ ವೈಷಮ್ಯ ಹೊಂದಿದ್ದ ಕಾರಣದಿಂದ ಇತರೆ ನಾಲ್ಕು ಜನ ಆರೋಪಿತರಿಗೆ ಹತ್ಯೆ ಮಾಡಲು ಪ್ರೇರೆಪಿಸಿ ಸುಪಾರಿ ನೀಡಿ ಸಂಘಟಿತವಾಗಿ ತಂಡ ರಚಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ರಾತ್ರಿ ಇಲ್ಲಿನ ಬಸ್ ನಿಲ್ದಾಣದ ಎದುರಿನ ಬಾಲಾಜಿ ಹೊಟೇಲ್ ನಲ್ಲಿ NMDಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿತ್ತು.
ಉತ್ತರಕನ್ನಡ ಪೊಲೀಸ್ ಅಧೀಕ್ಷಕರಾದ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಬಿ., ಶಿರಸಿ ಡಿ.ಎಸ್.ಪಿ. ಗೀತಾ ಪಾಟೀಲ್, ಮುಂಡಗೋಡ ಸಿಪಿಐ ರಂಗನಾಥ ನೀಲಮ್ಮನವರ್, ಗೋಕರ್ಣ ಸಿಪಿಐ ಶ್ರೀಧರ ಎಸ್.ಆರ್., ಮುಂಡಗೋಡ ಪಿಎಸ್ಐ ಮಂಜುನಾಥ ಗೌಡರ, ಚಿತ್ತಾಕುಲ ಪಿಎಸ್ಐ ಪರಶುರಾಮ ಮಿರ್ಜಗಿ, ಯಲ್ಲಾಪುರ ಪಿಎಸ್ಐ ರಾಜಶೇಖರ ವಂದಲಿ, ಪ್ರೋಬೆಶನರಿ ಪಿಎಸ್ಐ ಕಾಸೀಂ, ಮುಂಡಗೋಡ ಪೊಲೀಸ ಠಾಣೆಯ ಸಿಬ್ಬಂದಿಗಳಾದ ತಿರುಪತಿ ಚೌಡಣ್ಣನವರ, ಲಂಬಾಣಿ ಬಸವರಾಜ, ಮಹಾಂತೇಶ ಮುಧೋಳ, ಮುತ್ತಣ್ಣ ಭೋವಿ, ನಾಗಪ್ಪ ಮೋರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ, ಬಸವರಾಜ ಒಡೆಯರ್, ಯಲ್ಲಾಪುರ ಪೋಲಿಸ್ ಠಾಣೆಯ ನಿಬ್ಬಂದಿಗಳಾದ
ಮಹಮ್ಮದ ಶಫೀ ಶೇಖ, ಬಸವರಾಜ ಹಗರಿ, ಪ್ರವೀಣ ಪೂಜಾರ, ಗೋಕರ್ಣ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತ ಕಟಬರ ಹಾಗೂ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಯಾದ ಉದಯ ಗುನಗಾ, ಬಬನ್ ಕದಂ ರವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು



