ಧಾರವಾಡ: ಸಾಮಾನ್ಯವಾಗಿ ಒಂದು ಬೈಕ್ ಮೇಲೆ ಇಬ್ಬರು ಸಂಚರಿಸುವುದನ್ನು ನೋಡಿರುತ್ತೇವೆ. ಆದರೆ, ಜನನಿಬಿಡ ಧಾರವಾಡ ನಗರದಲ್ಲಿಯೇ ಐವರು ತೆರಳುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕು ಬಿದ್ದಿದ್ದಾರೆ.
ಬುಧವಾರ ಇಲ್ಲಿನ ಮದಿಹಾಳ ಬಳಿಯಿರುವ ಸಾರಿಗೆ ಸಂಸ್ಥೆಯ ಡಿಪೋ ಮುಂಭಾಗದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಒಂದೇ ಬೈಕ್ ಮೇಲೆ ಹೊರಟಿದ್ದವರನ್ನು ತಡೆದು ನಿಲ್ಲಿಸಿದ್ದಾರೆ.

ಆಶ್ಚರ್ಯ ಎಂದರೆ ಬೈಕ್ ಚಲಾಯಿಸುತ್ತಿದ್ದವನು ಹೆಲ್ಮೆಟ್ ಕೂಡ ಧರಿಸಿರಲಿಲ್ಲ.
ನಂತರ ಪೊಲೀಸರು ಬೈಕ್ ವಶಕ್ಕೆ ಪಡೆದು ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಚಾರಿ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ವಿ.ಆಯ್.ಬಳ್ಳಾರಿ ಮತ್ತು ಕಾನ್ಸಟೇಬಲ್ ಆಶ್ಪಕ್ ಬಡಕಾಶಪ್ಪನವರ ಕ್ರಮ ಕೈಕೊಂಡಿದ್ದಾರೆ.



