ಮನಸೂರಲ್ಲಿ ಅವಘಡ – ಮುಗಿಲು ಮುಟ್ಟಿದ ಆಕ್ರಂದನ
ಧಾರವಾಡ: ಮನೆ ಕಟ್ಟಲು ತೋಡಿದ್ದ ನೀರಿನ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ತಾಲೂಕಿನ ಮನಸೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಕುಮಾರ ನಿಂಗಪ್ಪ ಮುದಕಣ್ಣವರ (7) ಹಾಗೂ ಪ್ರಥಮ್ ಉಳ್ಳಾಗಡ್ಡಿ (7) ಎಂಬ ಬಾಲಕರೇ ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಕುಮಾರ ಧಾರವಾಡದ ಸತ್ತೂರು ನಿವಾಸಿಯಾಗಿದ್ದ. ಈತ ರಜೆಗೆಂದು ತನ್ನ ಮಾವನ ಮನೆಗೆ ಬಂದಿದ್ದ.
ಪ್ರಥಮ ಹಾಗೂ ಕುಮಾರ ಸಂಜೆ ಆಟವಾಡಲೆಂದು ಹೊರಗಡೆ ಹೋಗಿದ್ದರು. ರಾತ್ರಿಯಾದರೂ ಇವರು ಮನೆಗೆ ಬಾರದೇ ಇದ್ದಿದ್ದರಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು.
ಅದೇ ಗ್ರಾಮದ ವ್ಯಕ್ತಿಯೊಬ್ಬರು ಮನೆ ಕಟ್ಟಲೆಂದು ನೀರಿನ ಗುಂಡಿ ತೋಡಿದ್ದರು. ಆ ಗುಂಡಿಯಲ್ಲಿ ಬಾಲಕರು ಬಿದ್ದಿದ್ದು ತದನಂತರ ಬೆಳಕಿಗೆ ಬಂದಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




