ಧಾರವಾಡ : ಕರ್ನಾಟಕ ರಾಜ್ಯ ವಕೀಲರ ಪರಿಷತಗೆ ನಡೆದ ಚುನಾವಣೆಯಲ್ಲಿ ಸತತವಾಗಿ 6 ನೇ ಬಾರಿಗೆ ಹಿರಿಯ ವಕೀಲರಾದ ಆನಂದಕುಮಾರ ಅಪ್ಪು ಮಗದುಮ್
ಗೆಲವು ಸಾಧಿಸುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಮಗದುಮ್ ಅವರು ಸುಮಾರು 30 ವರ್ಷಗಳಿಗಿಂತ ಹೆಚ್ಚು ಕಾಲ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಹಾಗೂ 2012 ರಲ್ಲಿ ಅಧ್ಯಕ್ಷರಾಗಿ ತಮ್ಮ ಅಪಾರ ಸೇವೆಯನ್ನು ಸಲ್ಲಿಸಿ ಏಕೈಕ ವ್ಯಕ್ತಿಯಾಗಿದ್ದಾರೆ.

ನಿರಂತರ 6ನೇ ಬಾರಿಯ ಗೆಲುವು ಸುಲಭವಲ್ಲ ಇದು ವಕೀಲರ ನಿಷ್ಠೆ, ಪ್ರೀತಿ ಮತ್ತು ಪ್ರಾಮಾಣಿಕ ಶ್ರಮಕ್ಕೆ ಸಿಕ್ಕ ಪ್ರತಿಫಲ.” ಸತತವಾಗಿ 6 ಬಾರಿ ರಾಜ್ಯ ವಕೀಲರ ಪರಿಷತ್ತಿಗೆ ಆಯ್ಕೆ ಆಗಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ‘ಕನ್ನಡ ಧ್ವನಿ’ ಧಾರವಾಡ ಪ್ರತಿನಿಧಿ ಜೊತೆ ಮಾತನಾಡುತ್ತಾ ಹೇಳಿದರು.



