ಧಾರವಾಡ : ಜಿಲ್ಲಾ ಪಂಚಾಯತ್
ಮೀಸಲಾತಿ ಪ್ರಕಟವಾಗಿದ್ದು ಅನೇಕ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಇವರೇ ಪಕ್ಕಾ ಎಂಬ ರೀತಿಯ ಲೆಕ್ಕಾಚಾರ ಆರಂಭವಾಗಿದೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಶಿವಳ್ಳಿ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ತಾಲೂಕಿನ ಹಾರೋಬೆಳವಡಿ ಗ್ರಾಮದ ಶಿವಳ್ಳಿ ಅವರು, ಮೂಲತಃ ಕೃಷಿಕ ಕುಟುಂಬದವರು. ಈ ಹಿಂದೆ ಬಿಜೆಪಿಯಲ್ಲಿ ಇದ್ದಾಗ ಉಪ್ಪಿನ ಬೆಟಗೇರಿ ಕ್ಷೇತ್ರದ ಟಿಕೆಟ್ ಬಯಸಿದ್ದ ಅವರಿಗೆ ಟಿಕೆಟ್ ಸಿಗದ ಕಾರಣ ಬೇಸತ್ತು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಅಂದಿನಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು, ಬಲವರ್ಧನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣಕರ್ತರಾಗಿದ್ದರು. ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಪಕ್ಷದ ನಾಯಕರ ಅಣತಿಯಂತೆ ಸಭೆ, ಸಮಾವೇಶಗಳ ಆಯೋಜನೆ, ಸರಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿಯೂ ಶಿವಳ್ಳಿ ಅವರು ಪ್ರಮುಖ ಪಾತ್ರವಹಿಸುತ್ತ ಬಂದಿದ್ದಾರೆ.
ರಾಜಕೀಯ ಚಟುವಟಿಗಳ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ಮುಂಚೂಣಿಯಲ್ಲಿದ್ದು ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಹಲವಾರು ಸಂಘ-ಸಂಸ್ಥೆಗಳ ಜೊತೆಗೂಡಿ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತ ಬಂದಿದ್ದಾರೆ.
ಧಾರವಾಡ ತಾಲೂಕಿನಾದ್ಯಂತ ಚಿರಪರಿಚಿತ ವ್ಯಕ್ತಿ ಆಗಿರುವ ಈಶ್ವರ ಶಿವಳ್ಳಿ ಅವರು ಸರಳ ಮತ್ತು ಸಜ್ಜನ ವ್ಯಕ್ತಿತ್ವದವರು. ತಮ್ಮ ಸ್ನೇಹಪರ ಮತ್ತು ಪರೋಪಕಾರಿ ಗುಣಗಳಿಂದ ಜನಾನುರಾಗಿ ಮುಖಂಡ ಎನಿಸಿದ್ದಾರೆ.
ಪಕ್ಷದ ಶಿಸ್ತಿನ ಗಡಿ ದಾಟದ ನಿಷ್ಠಾವಂತ ವ್ಯಕ್ತಿ ಎನಿಸಿಕೊಂಡಿರುವ ಶಿವಳ್ಳಿ ಅವರು ಅಮ್ಮಿನಬಾವಿ ಕ್ಷೇತ್ರದ ಅಭ್ಯರ್ಥಿ ಆಗಬೇಕು ಎಂಬುದು ಬಹುಪಾಲು ಜನರ ಅನಿಸಿಕೆ. ಜೊತೆಗೆ ಅವರ ಅಭಿಮಾನಿಗಳ ಅಪೇಕ್ಷೆಯೂ ಅದೇ ಆಗಿದೆ. ಅಲ್ಲದೇ ಕ್ಷೇತ್ರವನ್ನು ಗೆಲ್ಲಬಲ್ಲ ಸೂಕ್ತ ಉಮೇದುವಾರ ಕೂಡ ಎಂಬ ಮಾತು ಈಗ ಕೇಳಲಾರಂಭಿಸಿದೆ.
ಅಲ್ಲದೇ ಕ್ಷೇತ್ರವನ್ನು ಗೆಲ್ಲಬಲ್ಲ ಸೂಕ್ತ ಉಮೇದುವಾರ ಕೂಡ ಎಂಬ ಮಾತು ಮೀಸಲಾತಿ ಪ್ರಕಟವಾದ ತಕ್ಷಣ ಕೇಳಿ ಬರಲಾರಂಭಿಸಿದೆ.
ವರದಿ : ಪುಂಡಲೀಕ ಹಡಪದ
ಧಾರವಾಡ ವರದಿಗಾರರು




