ಧಾರವಾಡ: ತಾಲೂಕಿನ ಶಿಂಗನಹಳ್ಳಿ ಗ್ರಾಮದ ಕರೆಮ್ಮನ ಕೆರೆಯಲ್ಲಿ ಮುಳುಗಿ ಮೂವರು ಬಾಲಕರ ಮೃತಪಟ್ಟಿದ್ದಾರೆ.
ಬಿಸಿಲು ಝಳದಿಂದ ಈಜಾಡಲು ಹೋದ ಮೆಹಬೂಬ್ ಸುಭಾನಿ (15) , ಅನ್ವರ್ ಇಬ್ರಾಹಿಂ ಇಟ್ನಾಳ(13), ಸುಭಾನಿ ಇಸಾಕ್ ಭಾಗೋಜಿಕೊಪ್ಪ(12) ಮೃತರಾದ ಬಾಲಕರಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಜಮಾಯಿಸಿದ್ದು ಅವರು ನೆರವಿನಿಂದ ಮೃತದೇಹ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಗುಂಜನ್ ಆರ್ಯ, ಡಿಎಸ್ಪಿ ವಿನೋದ್ ಮುಕ್ತೆದಾರ, ಸಿಪಿಐ ಲೋಹಾರ ಆಗಮಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.ಇಡೀ ಗ್ರಾಮವೇ ಶೋಕದಲ್ಲಿ ಮುಳುಗಿದೆ.




