ಧಾರವಾಡ: ಕಳೆದ ಎಪ್ರೀಲ್ 10ರಂದು ನಡೆದ ಯುವ ಕಾಂಗ್ರೆಸ್ ಮುಖಂಡ ಫೈರೋಜ್ ಪಠಾಣ ಕೊಲೆ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಅವರಿಗೆ ಹೈಕೋರ್ಟ ಜಾಮೀನು ಮಂಜೂರು ಮಾಡಿದೆ.

ಈಗಾಗಲೇ ಈ ಪ್ರಕರಣದಲ್ಲಿ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತಮಾಟಗಾರಗಾಗಿಯೂ ತೀವ್ರ ಹುಡುಕಾಟ ನಡೆದಿತ್ತಲ್ಲದೇ ಅವರು ಹೈದ್ರಾಬಾದ್ದಲ್ಲಿ ಇದ್ದಾರೆ, ವಿದೇಶಕ್ಕೆ ತೆರಳಿದ್ದಾರೆಂಬ ಗುಸುಗುಸು ವ್ಯಾಪಕವಾಗಿ ಹಬ್ಬಿತ್ತು.
ಹೈಕೋರ್ಟನ ಮೊರೆ ಹೋಗಿದ್ದ ತಮಾಟಗಾರ ಅವರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ ಜಾಮೀನು ಆದೇಶ ನೀಡಿದ್ದು, ಧಾರವಾಡದ ಹಿರಿಯ ನ್ಯಾಯವಾದಿಗಳಾದ ಕೆ.ಎಲ್.ಪಾಟೀಲ ಇವರ ಪರ ವಕಾಲತ್ತು ವಹಿಸಿದ್ದರು.




