*ಜಿ ಎಸ್ ಪಾಟೀಲ ವಿಧಾನಸಭಾ ಸ್ಪೀಕರ್ , ಸಲೀಂ ಅಹ್ಮದ್ ಪರಿಷತ್ ಸಭಾಪತಿ*
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿಗೆ ತೆರೆಬೀಳುವ ಕ್ಷಣ ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಇಂದು ಸಂಜೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ 4 ಗಂಟೆಗೆ ನಡೆಯಲಿದೆ. ಪದಗ್ರಹಣ ಸಮಾರಂಭಕ್ಕಾಗಿ ಈಗಾಗಲೇ ರಾಜಭವನದಲ್ಲಿ ಸಿದ್ಧತೆಯು ಭರದಿಂದ ಸಾಗಿದೆ.

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಎರಡು ತಿಂಗಳ ಬಳಿಕ ಸಂಪುಟ ವಿಸ್ತರಣೆಯಾಗುತ್ತಿದ್ದು, ಸಿಎಂ ಡಿಕೆಶಿ ನೇತೃತ್ವದ ಸಚಿವ ಸಂಪುಟವನ್ನು ಸೇರುವ ನೂತನ ಸಚಿವರು ಯಾರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು ಹಲವು ಘಟಾನುಘಟಿಗಳಿಗೆ ಕೊಕ್ ನೀಡಲಾಗಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರ ನಡುವಿನ ಮಹತ್ವದ ಸಭೆಯ ಬಳಿಕ ಅಂತಿಮ ಪಟ್ಟಿ ಸಿದ್ದಗೊಂಡಿದ್ದು, ಖಾಲಿಯಿರುವ 20 ಸಚಿವ ಸ್ಥಾನಗಳನ್ನು ತುಂಬಲು ನಿರ್ಧರಿಸಲಾಗಿದೆ.
ಧಾರವಾಡ ಜಿಲ್ಲೆಯಿಂದ ಕೊಳಚೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೆಸರು ಮಂತ್ರಿಗಳ ರೇಸ್ನಲ್ಲಿ ಇತ್ತಾದರೂ ಸಂತೋಷ ಲಾಡ್ ಅವರೇ ಮತ್ತೆ ಲಾರ್ಡ ಆಗಿದ್ದಾರೆ.
ಸಚಿವರ ಪಟ್ಟಿ ಇಂತಿದೆ.
೧. ಲಕ್ಷ್ಮಣ ಸವದಿ (ಅಥಣಿ)
೨. ಮಾಗಡಿ ಬಾಲಕೃಷ್ಣ (ಮಾಗಡಿ)
೩. ವಿಜಯಾನಂದ ಕಾಶಪ್ಪನವರ್ (ಹುನಗುಂದ)
೪. ಶಿವರಾಜ್ ತಂಗಡಗಿ (ಕನಕಗಿರಿ)
೫. ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ ಉತ್ತರ)
೬. ಪುಟ್ಟರಂಗಶೆಟ್ಟಿ (ಚಾಮರಾಜನಗರ)
೭. ಸಂತೋಷ್ ಲಾಡ್ (ಕಲಘಟಗಿ)
೮. ಡಾ.ಅಜಯ್ ಸಿಂಗ್ (ಜೇವರ್ಗಿ)
೯. ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ)
೧೦. ರಿಜ್ವಾನ್ ಅರ್ಷದ್ (ಶಿವಾಜಿಇ)
೧೧. ಜಮೀರ್ ಅಹ್ಮದ್ ಖಾನ್ (ಚಾಮರಾಜಪೇಟೆ)
೧೨. ರುದ್ರಪ್ಪ ಲಮ್ಹಾಣಿ
೧೩. ಶಿವಲಿಂಗೇಗೌಡ (ಅರಸೀಕೆರೆ)
೧೪. ಚೆಲುವರಾಯಸ್ವಾಮಿ (ನಾಗಮಂಗಲ)
೧೫. ಬಸವರಾಜ ರಾಯರೆಡ್ಡಿ (ಯಲಬುರ್ಗಾ)
೧೬. ಟಿ.ರಘುಮೂರ್ತಿ (ಚಳ್ಳಕೆರೆ)
೧೭. ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ)
೧೮. ಮಂಕಾಳು ವೈದ್ಯ
೧೯. ಬಸವಂತಪ್ಪ(ಮಾಯಕೊAಡ)
೨೦. ಮಧು ಬಂಗಾರಪ್ಪ (ಸೊರಬ)
ಸಿದ್ದರಾಮಯ್ಯ ಸಂಪುಟದಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ, ಎಚ್.ಕೆ.ಪಾಟೀಲ, ಎಸ್.ಎಸ್.ಮಲ್ಲಿಕಾರ್ಜುನ, ದಿನೇಶ ಗುಂಡೂರಾವ ಸೇರಿ ಹಲವರ ಕೈ ಬಿಡಲಾಗಿದ್ದು ಮಹಿಳಾ ಕೋಟಾದಡಿ ಮೊನ್ನೆ ತಾನೆ ಪರಿಷತ್ ವಿಜೇತೆ ಎಂದು ಘೋಷಿಸಿದ ಗಾಯತ್ರಿ ಶಾಂತೇಗೌಡ ಸ್ಥಾನ ಪಡೆದಿದ್ದಾರೆ.
ವಿಧಾನ ಸಭಾ ಸಭಾಪತಿಯಾಗಿ ರೋಣದ ಶಾಸಕ ಜಿ.ಎಸ್.ಪಾಟೀಲ, ಉಪಾ ಸಭಾಪತಿಯಾಗಿ ಪೊನ್ನಣ್ಣ , ಪರಿಷತ್ ಅಧ್ಯಕ್ಷರಾಗಿ ಸಲೀಮ್ ಅಹ್ಮದ, ಡೆಪ್ಯುಟಿ ಸ್ಪೀಕರ್ ಆಗಿ ಉಮಾಶ್ರಿ ಹೆಸರುಗಳನ್ನು ಸಹ ಅಂತಿಮಗೊಳಿಸಿದೆ ಎನ್ನಲಾಗಿದೆ.



