ಹುಬ್ಬಳ್ಳಿ : ಅವಳಿನಗರದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ರೈಲು ನಿಲ್ದಾಣ ಪಾರ್ಕಿಂಗ್ ಸ್ಥಳದ ಹತ್ತಿರ ರಸ್ತೆಯ ಮೇಲೆ ಗಾಂಜಾ ಮಾದಕ ಪದಾರ್ಥವನ್ನು ಮಾರಾಟ ಮಾಡುತ್ತಿದ ನಾಲ್ವರನ್ನು ಬಂಧಿಸಿ, 6.135 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.

ರಣದಮ್ಮ ಕಾಲನಿಯ ಮಾಂತೇಶ ತಂದೆ ಮಂಜುನಾಥ ಹೊಸಮನಿ, ತಿಮ್ಮಸಾಗರ ರೋಡಿನ ನಿವಾಸಿ ಅಲೀನಾ @ ಅರ್ಬಾಜ್ ತಂದೆ ಮೊಹಮ್ಮದ್ ನೂರುಲ್ಲಾ,
ತೊರವಿ ಹಕ್ಕಲಿನ ಫಯಾಜ್ @ ಮಂಡ್ಯ ತಂದೆ ಮಾಬೂಬಸಾಬ ಗುಂಟವಾಲೆ ಹಾಗೂ ನೂರಾನಿ ಪ್ಲಾಟ್ ನಿವಾಸಿ
ಸೊಯಬ್ ತಂದೆ ದಾದಾಪೀರ ಧಾರವಾಡ ಇವರುಗಳು ಬಂಧಿತ ಆರೋಪಿಗಳಾಗಿದ್ದಾರೆ.
ಅಂದಾಜು 1,53,000 ಮೌಲ್ಯದ ಗಾಂಜಾ ಹಾಗೂ 04 ಮೊಬೈಲ್ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದ್ದು ಇವೆಲ್ಲವುಗಳ ಒಟ್ಟು ಮೌಲ್ಯ 2,60,500 ಆಗಿದೆ.
ಈ ಕಾರ್ಯಾಚರಣೆಯಲ್ಲಿ ಶಿವಪ್ರಕಾಶ ನಾಯಕ್ ಎಸಿಪಿ ಸಿಸಿಬಿ ಅವರ ನೇತೃತ್ವದಲ್ಲಿ ಮಾರುತಿ ಗುಳ್ಳಾರಿ ಪಿಐ , ಪಿಎಸ್ಐ ರೂಪಕ ಡಿ ಹಾಗೂ ಸಿಬ್ಬಂದಿಗಳಾದ ಎಂ.ಬಿ. ದನಿಗೊಂಡ, ಎಂ.ಡಿ. ಬಡಿಗೇರ, ಡಿ.ಎ. ಮಾಂಗ, ಎಂ.ಬಿ. ಭಜಂತ್ರಿ, ಬಿ.ಎಂ. ಹೆದ್ದೇರಿ ಭಾಗವಹಿಸಿದ್ದು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೂತನ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.



