*14ರ ಬದಲು ಇಂದೇ ರಾಜೀನಾಮೆ – ಹಂಗಾಮಿಯಾಗಿ ಮುಂದುವರಿಕೆ*
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಸೋಲಿಲ್ಲದ ಸರದಾರ, ಶಿಕ್ಷಕರ ಧ್ವನಿ, ದಾಖಲೆ ವೀರರಾಗಿರುವ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಸಿದ್ದಾರೆ.

ಪರಿಷತ್ ಸದಸ್ಯೆಯಾಗಿ ಗಾಯತ್ರಿ ಶಾಂತೇಗೌಡ ಪ್ರಮಾಣವಚನ ಕಾರ್ಯಕ್ರಮದ ನಂತರ ಶಕ್ತಿ ಸೌಧದ ಸಭಾಪತಿಗಳ ಕಚೇರಿಯಲ್ಲಿ ಹೊರಟ್ಟಿ ಜೊತೆ ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಚರ್ಚೆ ನಡೆಸಿದ್ದರು. ಅದಕ್ಕೂ ಮೊದಲು ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದರು.
ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಶಿವಕುಮಾರ್ ಹಿರಿಯರಾದ, ಅವರಿಗೆ ರಾಜಕೀಯದ ವಾಸ್ತವಾಂಶದ ಅರಿವಿದೆ. ಹೀಗಾಗಿಯೇ ಗೌರವಯುತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಹೊಸಬರು ಆಯ್ಕೆ ಆಗುವ ತನಕ ಅವರೇ ಹಂಗಾಮಿ ಸಭಾಪತಿಗಳಾಗಿರಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿರುವದಾಗಿ ತಿಳಿಸಿದ್ದಾರೆ.
ಈ ಮೊದಲು ಆಗಸ್ಟ್ 14 ರಂದು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ತೀರ್ಮಾನಿಸಿದ್ದರು.



