*ಕಾನೂನು ಬಾಹಿರ ಚಟುವಟಿಕೆ ಮಾಡುವವರೆ ಹುಷಾರ್ : ಖಡಕ್ ಸಂದೇಶ/ ಜನಸ್ನೇಹಿ ಪೊಲೀಸಿಂಗ್ ಸಂದೇಶ ರವಾನೆ*
ಹುಬ್ಬಳ್ಳಿ: ಕಳೆದ ದಿ. 29ರಿಂದ ನೂತನ ಪೊಲೀಸ್ ಆಯುಕ್ತರ ಆಗಮನದ ವಿಚಾರದಲ್ಲಿ ನಿರ್ಮಾಣಗೊಂಡಿದ್ದ ಗೊಂದಲ ಇಂದು ಬಗೆಹರಿದಿದ್ದು, ಖಡಕ್ ಐಪಿಎಸ್ ಎಂದೇ ಕರೆಸಿಕೊಳ್ಳುವ ಭೂಷಣ ಗುಲಾಬರಾವ್ ಬೋರಸೆ ಇದುವರೆಗೆ ಆಯುಕ್ತರಾಗಿದ್ದ ಎನ್.ಶಶಿಕುಮಾರ ಅವರಿಂದ ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನೈತಿಕ, ಅಕ್ರಮ ಕುಳಗಳಿಗೆ ಸ್ಪಷ್ಟ ಸಂದೇಶ ನೀಡಿದ್ದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸಿದವರು ಯಾರೇ ಆದರೂ ಆದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಎನ್.ಡಿ.ಪಿ.ಎಸ್, ಆರ್ಮ್ಸ್ ಆ್ಯಕ್ಟ್ , ಗೂಂಡಾ ಕಾಯಿದೆ ಅಡಿಯಲ್ಲಿ ಹೋಗುವುದು ನಿಶ್ಚಿತ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಟ್ರಾಫಿಕ್ ಸಮಸ್ಯೆಗಳಿಗೆ ಆದರೆ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಉತ್ತಮ ರೀತಿಯಲ್ಲಿ ಜನರಿಗೆ ಸೇವೆ ನೀಡಲು ಶ್ರಮಿಸಲಾಗುವುದಲ್ಲದೇ ತಮ್ಮ ಮೊದಲ ಆದ್ಯತೆ ಜನಸ್ನೇಹಿ ಪೊಲೀಸಿಂಗ್ ಎಂಬ ಸಂದೇಶ ನೀಡಿದರು.
ಕಚೇರಿಗೆ ಆಗಮಿಸಿದ ನೂತನ ಕಮೀಷನರ್ ಗೆ ಗಾಡ್ ಆಫ್ ಹಾನರ್ ಗೌರವ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು. ಎನ್.ಶಶಿಕುಮಾರ್ ಅವರಿಗೆ ಇದುವರೆಗೆ ಯಾವುದೆ ಸ್ಥಾನ ತೋರಿಸಿಲ್ಲವಾಗಿದ್ದು, ದಾವಣಗೆರೆ ಐಜಿಪಿ ಆಗಿ ನೇಮಕಗೊಳ್ಳುವರೆಂಬ ವದಂತಿ ಇದೆ. ಅವರನ್ನು ಸಿಬ್ಬಂದಿ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟರು.

ಇದುವರೆಗೆ ಬೆಳಗಾವಿಯ ಪೊಲೀಸ್ ಆಯುಕ್ತರಾಗಿದ್ದ ಭೂಷಣ ಬೋರಸೆ 2009ರ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಬೋರಸೆ, ಬಿ.ಇ, ಎಂ.ಟೆಕ್ ಪದವೀಧ್ರರರಾಗಿದ್ದು,ಪೊಲೀಸ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಎರಡು ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಸೈಬರ್ ವಿಭಾಗದ ಎಸ್ ಪಿಯಾಗಿ, ಬೆಂಗಳೂರು ನಗರ ಡಿಸಿಪಿಯಾಗಿ ಅಲ್ಲದೇ ರಾಷ್ಟೀಯ ಪೊಲೀಸ್ ಅಕಾಡೆಮಿ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರಲ್ಲದೇ
2025ರಲ್ಲಿ ಡಿಜಿ ಮತ್ತು ಐಜಿಪಿ ಅವರ ಮೆಚ್ಚುಗೆಯ ಪದಕ ಪಡೆದಿರುವ 2021ರಲ್ಲಿ . ಕೇಂದ್ರ ಗೃಹ ಸಚಿವರ ಪದಕ , ಎಸ್ವಿಪಿ ಎನ್ಪಿಎ ನಿರ್ದೇಶಕರ ಮೆಚ್ಚುಗೆಯ ಪದಕ ಮತ್ತು
ನಾಗರಿಕ-ಕೇಂದ್ರಿತ ಸೇವೆಗಳಲ್ಲಿ ಇ-ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ರಸ್ತೆ ಸುರಕ್ಷತೆ, ಪರಿಣಾಮಕಾರಿ ಡೇಟಾಬೇಸ್ ನಿರ್ವಹಣೆ ಮತ್ತು ಕ್ರಿಪ್ಟೋಕರೆನ್ಸಿ ತನಿಖೆಯ ವಿಷಯಗಳ ಕುರಿತು ಇವರ ನಾಲ್ಕು ಅಂತರರಾಷ್ಟ್ರೀಯ ಮತ್ತು ಐದು ರಾಷ್ಟ್ರೀಯ ಪ್ರಕಟಣೆಗಳಿವೆ.ನಾಲ್ಕು ಅಂತರರಾಷ್ಟ್ರೀಯ ಮತ್ತು ಏಳು ರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳು/ಸಮ್ಮೇಳನಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.



