ಕಥೆ,ಕವನ ವಿಜೇತರಿಗೆ ಬಹುಮಾನ ವಿತರಣೆ – ಆರು ಸಾಧಕರಿಗೆ ಗೌರವ ಸನ್ಮಾನ
ಹುಬ್ಬಳ್ಳಿ : ಕನ್ನಡದ ಲೇಖಕರ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಕನ್ನಡ ಧ್ವನಿ ಟ್ರಸ್ಟ್ ( ರಿ) ಕಳೆದ ಜನವರಿಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥೆ, ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಮಾರಂಭ ದಿ. 24ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸಭಾಭವನದಲ್ಲಿ ಜರುಗಲಿದೆ.
ಉದ್ಘಾಟನೆಯನ್ನು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸಲಿದ್ದು ವಿಶೇಷ ಪುರವಣಿಯನ್ನು ಪತಂಜಲಿ ಯೋಗ ಸಮಿತಿ ದಕ್ಷಿಣ ಭಾರತ ಪ್ರಭಾರಿ ಭವರಲಾಲ ಆರ್ಯ, ಸ್ವರ್ಣ ಸಮೂಹದ ಮುಖ್ಯಸ್ಥ ಡಾ.ಚಿಗರುಪಾಟಿ ವಿ.ಎಸ್.ವಿ.ಪ್ರಸಾದ ಬಿಡುಗಡೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಜಿತೇಂದ್ರ ಮಜೇಥಿಯಾ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ, ಹಾವೇರಿಯ ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ ಆಗಮಿಸಲಿದ್ದು, ನಿವೃತ್ತ ಎಸ್ ಪಿ ಎ.ಆರ್.ಬಡಿಗೇರ, ಕೆಸಿಸಿಐ ಅಧ್ಯಕ್ಷ ಜಿ.ಕೆ.ಆದಪ್ಪಗೌಡರ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹುಬ್ಬಳ್ಳಿ ಮೂಲದ ಐಪಿಎಲ್ ಅಂಪೈರ್ ಅಭಿಜಿತ ಬೆಂಗೇರಿ, ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ, ರಾಜೀವ ಗಾಂಧಿ ವಿವಿ ಸಿಂಡಿಕೇಟ ಸದಸ್ಯ ಡಾ.ಎಂ.ಜೆ.ಜೀವಣ್ಣವರ,ಗ್ರಾಮೀಣ ಠಾಣೆ ಪಿಐ ಮುರುಗೇಶ ಚನ್ನಣ್ಣವರ,ಅಚೀವರ್ ಜಿಮ್ ಉತನ್ನಗಳ ತಯಾರಿಕಾ ಸಂಸ್ಥೆಯ ಮುಖ್ಯಸ್ಥ ಜಯರಾಮ ಶೆಟ್ಟಿ ಹಾಗೂ ಸಿಲ್ಕ ಅಸೋಸಿಯೇಶನ್ ಉಪಾಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರುಗಳನ್ನು ಸನ್ಮಾನಿಸಲಾಗುವುದು. ಅಲ್ಲದೇ ಪ್ರೋ. ರಾಜೇಶ ಹೊಂಗಲ ಅವರ ಹಸನಾಗಲಿ ಬದುಕು ಕವನ ಸಂಕಲನ ಬಿಡುಗಡೆಗೊಳ್ಳಲಿದೆ.
ವಿಜೇತರು : ಬ್ಯಾಡಗಿಯ ಜಮೀರ ರಿತ್ತಿ ಇವರ ‘ದೇವರ ದೀಪ’ ಕಥೆ (ಹತ್ತು ಸಾವಿರ ರೂ ನಗದು) ಹಾಗೂ ಧಾರವಾಡದ ವಿದ್ಯಾಸಾಗರ ದೀಕ್ಷಿತ ಅವರ ‘ಯದ್ಧವೆಂಬುದು ತೀರದ ಬಾಯಾರಿಕೆ’ ಕವನ ( ಐದು ಸಾವಿರ ನಗದು) ಪ್ರಥಮ ಬಹುಮಾನಕ್ಕೆ ಪಾತ್ರವಾಗಿವೆ.
ಕಥಾ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಲತಾ ಹೆಗಡೆಂ ( ದ್ವಿತೀಯ) , ಮೈಸೂರಿನ ಎನ್.ಆರ್.ರೂಪಶ್ರೀ ( ತೃತೀಯ) ಹುಬ್ಬಳ್ಳಿಯ ವಿವೇಕ ಹೆಗಡೆ, ಗೋಕಾಕಿನ ಸುಷ್ಮಾ ಸವಸುದ್ದಿ, ಬಾಗಲಕೋಟೆಯ ಮಲ್ಲಿಕಾರ್ಜುನ ಶೆಲ್ಲಿಕೇರಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ಕಾವ್ಯ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಮಂಜುನಾಥ ಹೊಸ್ಮನೆ (ದ್ವಿತೀಯ), ನಂಜನಗೂಡಿನ ಎಸ್.ಎಲ್.ವರಲಕ್ಷಿö್ಮ ಮಂಜುನಾಥ(ತೃತೀಯ), ಶಿರಸಿಯ ಡಾ. ದಿವ್ಯಾ ಹೆಗಡೆ, ಬೆಂಗಳೂರಿನ ಎನ್.ಶಂಕರರಾವ, ಚೆನ್ನೈನ ಸಂಧ್ಯಾ ಬಾದಾಮಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.



