ಬೆಂಗಳೂರು :ಕರ್ನಾಟಕ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪಡೆಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರು ಮತ್ತೆ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿ ನೇಮಕರಾಗಿದ್ದಾರೆ.
ಪಾಟೀಲ್ ಅವರನ್ನು ರಾಜ್ಯ ಸರ್ಕಾರ ಬೆಳಗಾವಿ ಉತ್ತರ ವಲಯದ ಐಜಿಪಿ ಯಾಗಿ ನೇಮಕ ಮಾಡಿದ್ದು, ಚೇತನ ಸಿಂಗ್ ರಾಥೋಡ್ ಅವರನ್ನು ಅಪರಾಧ ತನಿಖಾ ವಿಭಾಗದ ಐಜಿಪಿ ಯಾಗಿ ವರ್ಗಾವಣೆ ಮಾಡಲಾಗಿದೆ. ಪಾಟೀಲ ಅವರು ಮೀಸಲು ಪಡೆಯ ಐಜಿಪಿ ಸ್ಥಾನಕ್ಕೆ ಅನುಪಮ ಅಗರವಾಲ್ ನಿಯುಕ್ತಿಗೊಂಡಿದ್ದಾರೆ.




