ಧಾರವಾಡ: ನಗರದ ವಿದ್ಯಾಗಿರಿ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಎಸ್.ಕೆ ಗುಬ್ಬ ಪದವಿ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕ ಡಾ. ಜಿನಪ್ಪ ಕುಂದಗೋಳ
ಮತ್ತು ಅವರ ಪತ್ನಿ ವೈಶಾಲಿ ಮುನವಳ್ಳಿ ಒಂದೇ ದಿನ ಡಾಕ್ಟರೇಟ್ ಪದವಿ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಜಿನ್ನಪ್ಪ ಕುಂದಗೋಳ ಅವರು ಕ.ವಿ.ವಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಅಧ್ಯಕ್ಷಡಾ. ಎಂ.ಬಿ ಪಾಟೀಲ ಅವರ ಮಾರ್ಗದರ್ಶನದಲ್ಲಿ“ಪುರುಷ ಕುಸ್ತಿಪಟುಗಳ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ದೈಹಿಕ, ಮಾನವಶಾಸ್ತ್ರೀಯ ಮತ್ತು ಮನೋವೈಜ್ಞಾನಿಕ ಅಸ್ಥಿರಗಳ ಅಧ್ಯಯನ”ಎಂಬ ಪ್ರಬಂಧಕ್ಕೆ ಮತ್ತು ಜೆಎಸ್ ಎಸ್ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಅವರ ಧರ್ಮಪತ್ನಿ ವೈಶಾಲಿ ಮುನವಳ್ಳಿ ಅವರು ಕರ್ನಾಟಕ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಕಿವಡಣ್ಣವರ
ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಉತ್ತರ ಕರ್ನಾಟಕದಲ್ಲಿನ ಜೈನ ಧರ್ಮದ ಕೇಂದ್ರಗಳು” ಎಂಬ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ನೀಡಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಗುರುವಾರ ಜರುಗಿದ 75 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ದಂಪತಿಗೆ ಡಾಕ್ಟರೇಟ್ ಪ್ರದಾನ ಮಾಡಿದರು.
ಧಾರವಾಡ ತಾಲೂಕಿನ ಲೋಕೂರ ಗ್ರಾಮದ
ಡಾ.ಜಿನ್ನಪ್ಪ ಕುಂದಗೋಳ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿಪಟು ಆಗಿದ್ದರೆ, ಅವರ ಪತ್ನಿ ವೈಶಾಲಿ ಮುನವಳ್ಳಿ ಅತ್ಯುತ್ತಮ ಪ್ರಾಧ್ಯಾಪಕರು. ಉತ್ತಮ ಸಾಧನೆಗೈದ ದಂಪತಿಯನ್ನು
ಜೆ.ಎಸ್.ಎಸ್.ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯರಾದ ಡಾ. ವೆಂಕಟೇಶ ಮುತಾಲಿಕ, ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ್, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.




