ಧಾರವಾಡ: ತಮ್ಮ ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟ ತಪ್ಪಿಗೆ ಪಾಲಕರು ಭಾರಿ ಪ್ರಮಾಣದ ದಂಡ ಭರಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ನಗರದ ಮೈನುದ್ದೀನ್ ಜಲಾಲದಾರ ಎಂಬುವರೆ ಬಾರಿ ದಂಡ ಭರಿಸಿದ ಪಾಲಕರು.ಅವರ ಅಪ್ರಾಪ್ತ ಮಗ ಬೈಕ್ ಚಲಾಯಿಸುವಾಗ ಪೊಲೀಸರಿಗೆ ಸಿಕ್ಕು ಬಿದ್ದಿದ್ದನು.ನಂತರ ಪೊಲೀಸರು ಸಂಚಾರಿ ನಿಯಮಾನುಸಾರ ದಂಡ ವಿಧಿಸಿದ್ದರು.
ಇಂದು ನಗರದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಪಾಲಕರು 26 ಸಾವಿರ ರೂಪಾಯಿ ದಂಡ ಭರ್ತಿ ಮಾಡಿದ್ದಾರೆ. ಬಳಿಕ ಪೊಲೀಸರು ಬೈಕ್ ಮಾಲಿಕರಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡಿ ಕಳಿಸಿದ್ದಾರೆ. ಸಂಚಾರಿ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ವಿ.ಆಯ್.ಬಳ್ಳಾರಿ ಮತ್ತು ಕಾನ್ಸಟೇಬಲ್ ಆಶ್ಪಕ್ ಬಡಕಾಶಪ್ಪನವರ ಅವರು ಕ್ರಮ ಕೈಕೊಂಡಿದ್ದರು.




