*ರಾಜ್ಯದಲ್ಲಿ ಖಾಕಿ ಮೇಜರ್ ಸರ್ಜರಿ*
ಹುಬ್ಬಳ್ಳಿ : ರಾಜ್ಯದಲ್ಲಿ ಮೇಜರ್ ಪೊಲೀಸ್ ಸರ್ಜರಿ ಆಗಿದ್ದು 74 ಡಿವೈಎಸ್ಪಿ, 293 ಇನ್ಸ್ಪೆಕ್ಟರ್ ಹಾಗೂ 35 ಆರ್ ಪಿ ಐಗಳ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ ಉತ್ತರ ಎಸಿಪಿ ಸ್ಥಾನದಿಂದ ಕಲಬುರ್ಗಿಗೆ ವರ್ಗಾವಣೆ ಆದೇಶದಲ್ಲಿ ಇದ್ದ ಶಿವಪ್ರಕಾಶ್ ನಾಯಕ್ ಹುಬ್ಬಳ್ಳಿ ಧಾರವಾಡ ಸಿಸಿಬಿ ಎಸಿಪಿಯಾಗಿ ನಿಯುಕ್ತಿ ಗೊಂಡಿದ್ದಾರೆ. ಇಲ್ಲಿದ್ದ ಒಡೆಯರ್ ಅವರನ್ನು ಡಿಸಿ ಆರ್ ಬಿಗೆ ವರ್ಗಾವಣೆ ಮಾಡಲಾಗಿದೆ.

ಧಾರವಾಡ ಉಪನಗರ ಇನ್ಸ್ಪೆಕ್ಟರ್ ಆಗಿ ಮಹಾಂತೇಶ ಬಸಾಪುರ, ಸಿಸಿಬಿ ಇನ್ಸ್ಪೆಕ್ಟರ್ ಆಗಿ ರಮೇಶ್ ಕಾಂಬಳೆ ನೇಮಕಗೊಂಡಿದ್ದಾರೆ. ಧಾರವಾಡ ಡಿಎಆರ್ ಗೆ ವಿಠ್ಠಲ ಶಿಂದೆ ,ಮುರುಗೇಶ್ ಟಿ ಎಸ್. ರೇಲ್ವೆ ಠಾಣೆ ಗೆ ನೇಮಕವಾಗಿದ್ದಾರೆ.
ಈ ಹಿಂದೆ ಹುಬ್ಬಳ್ಳಿಯಲ್ಲಿ ಕಾರ್ಯ ಮಾಡಿರುವ ಪ್ರಶಾಂತ್ ನಾಯಕ್ ಯಲಹಂಕ ಠಾಣೆಗೆ ನೇಮಕಗೊಂಡಿದ್ದಾರೆ.




