*ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ಹೊಡೆಬಡಿಯ ಕ್ರಿಕೆಟ್* – *12 ಪಂದ್ಯಗಳ ರೋಚಕ ಸೆಣಸಾಟ*
ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಜೂ.27 ರಿಂದ ಜುಲೈ 3ರವರೆಗೆ `ಮಹಾರಾಜಾ ಟ್ರೋಫಿ ಕೆಎಸ್ಸಿಎ ಟಿ20′ ಪಂದ್ಯಾವಳಿಯ 2ನೇ ಹಂತದ ಒಟ್ಟು 12 ಲೀಗ್ ಪಂದ್ಯಗಳು ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ಕರ್ನಾಟಕ ಮತ್ತು ಜಮ್ಮು-ಕಾಶ್ಮೀರ ನಡುವಣ ರಣಜಿ ಫೈನಲ್ ನಂತರ ಮತ್ತೊಮ್ಮೆ ಕ್ರಿಕೆಟ್ ಕಲರವ ಆರಂಭವಾಗಲಿದೆ.

ಮಹಾರಾಜಾ ಟ್ರೋಫಿ ಕೆಎಸ್ಸಿಎ ಟಿ20 ಗವರ್ನಿಂಗ್ ಕೌನ್ಸಿಲ್ ಚೇರಮನ್ ಎಂ.ಎಸ್. ಕೇಶವ ಇಂದು ದೇಶಪಾಂಡೆ ನಗರದ ಕರ್ನಾಟಕ ಜಿಮಖಾನ್ ಅಸೋಷಿಯೇಶನ್ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು .
ಪ್ರಸಕ್ತ ಜೂ.20 ರಿಂದ ಜುಲೈ 12ರವರೆಗೆ ಮಹಾರಾಜಾ ಟ್ರೋಫಿ ಮೂರು ಹಂತದಲ್ಲಿ ನಡೆಯುತ್ತಿದ್ದು ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳ ನಡೆಯಲಿವೆ. ಮೈಸೂರಿನಲ್ಲಿ ಮೊದಲ ಹಂತ ಮುಗಿದ ನಂತರ 2ನೇ ಹಂತದಲ್ಲಿ 12 ಪಂದ್ಯ ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯಲಿದ್ದು ಈ ಪೈಕಿ 7 ಪಂದ್ಯ ಮಧ್ಯಾಹ್ನ ನಡೆದರೆ, ಹೊನಲು ಬೆಳಕಿನಲ್ಲಿ 5 ಪಂದ್ಯಗಳು ನಡೆಯಲಿವೆ ಎಂದರು.
ಹುಬ್ಬಳ್ಳಿ ಟೈಗರ್ಸ್ನ 4 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯುತ್ತಿವೆ. ಪಂದ್ಯಗಳು ಅತ್ಯಂತ ತುರುಸಿನಿಂದ ನಡೆಯಲಿದ್ದು, ಹೊಡೆಬಡಿಯ ಆಟ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿವೆ. ಅತ್ಯಂತ ಕಡಿಮೆ ಮೊತ್ತ ಅಂದರೆ, 100-200 ರೂ.ವರೆಗೆ ಟಿಕೆಟ್ ಕಾಯ್ದಿಸಲು ಉದ್ದೇಶಿಸಲಾಗಿದೆ. ಆನ್ಲೈನ್ ಮೂಲಕವೂ ಟಿಕೆಟ್ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಹಾಗೆಯೇ ಡಿಜಿಟಲ್ ಪೋರ್ಟಲ್ನಲ್ಲಿ ಲೈವ್ ಪಂದ್ಯ ಕೂಡ ಬಿತ್ತರಗೊಳ್ಳಲಿದೆ ಎಂದು ಹೇಳಿದರು.
ಮಹಾರಾಣಿ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಗೆ 4 ತಂಡಗಳನ್ನು ರಚಿಸಿದ್ದು, ಶೀಘ್ರ ಪಂದ್ಯಗಳ ಶೆಡ್ಯುಲ್ ಕೂಡ ಫಿಕ್್ಸ ಮಾಡಲಾಗುವುದು. ಕೇವಲ ನಾಲ್ಕು ತಂಡ ಇರುವುದರಿಂದ ಇವುಗಳನ್ನು ಬೆಂಗಳೂರಿನ ಮೈದಾನದಲ್ಲಿ ನಡೆಸಲು ಯೋಜಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹರಾಜಾ ಟ್ರೋಫಿ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎ.ವಿ.ಶಶಿಧರ, ಕೆಎಸ್ಸಿಎ ಧಾರವಾಡ ವಲಯ ಚೇರಮನ್ ಅಲ್ತಾಫ್ ಕಿತ್ತೂರ, ಕೆಎಸ್ಸಿಎ ಧಾರವಾಡ ವಲಯ ನಿಮಂತ್ರಕ ವೀರಣ್ಣ ಸವಡಿ, ಇನಾಸ್ಟ್ರಕ್ಚರ್ ಚೇರಮನ್ ವೀರೇಶ ಉಂಡಿ, ಹುಬ್ಬಳ್ಳಿ ಟೈಗರ್ಸ್ ಮಾಲೀಕ ಶಿವೆಕ್ ಜಿಂದಾಲ್, ವಿಜಯ ವೈದ್ಯ ಸೇರಿದಂತೆ ಇತರರು ಇದ್ದರು.
*ಎಲ್ಲ ವಲಯಗಳಲ್ಲಿ ಅಕಾಡೆಮಿ*
ಕೇವಲ 7 ತಿಂಗಳ ನಮ್ಮ ಅವಧಿಯಲ್ಲಿ ಎಲ್ಲ ವಲಯಗಳಲ್ಲಿ ಅಕಾಡೆಮಿ ಆರಂಭಿಸಲಾಗಿದೆ. ಆ ಮೂಲಕ ಕೆಎಸ್ಸಿಎ ಬೆಂಗಳೂರು ಕೇಂದ್ರಿಕೃತ ಎಂಬ ಹಣೆಪಟ್ಟಿಯನ್ನು ತೆಗೆಯುವ ಯತ್ನ ಮಾಡಲಾಗುತ್ತಿದೆಯೆಂದು ಕೆಎಸ್ಸಿಎ ಅಧ್ಯಕ್ಷ ಬಿ.ಕೆ.ವೆಂಕಟೇಶಪ್ರಸಾದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಹುಬ್ಬಳ್ಳಿ ಮೈದಾನದಲ್ಲಿ ಈಗಿರುವ ಮೆಟಲ್ ಲೈಟ್ಗಳನ್ನು ತೆಗೆದು ಹೊಸದಾಗಿ ಎಲ್ಇಡಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಹಳೆ ಲೈಟ್ಗಳನ್ನು ಬೇರೆ ಬೇರೆ ಜಿಲ್ಲೆಗಳ ಮೈದಾನದಲ್ಲಿ ಅವಳವಡಿಸಲು ಯೋಜಿಸಲಾಗಿದೆ. ಈ ಹಿಂದಿನ ಯಾ ಕಮಿಟಿಯೂ ಮಾಡದ ಕೆಲಸವನ್ನು 7 ತಿಂಗಳ ಅವಯಲ್ಲಿ ಮಾಡಿದ್ದೇವೆ. ವಿಶೇಷವಾಗಿ ಹುಬ್ಬಳ್ಳಿಯವರಾದ ಬಂದ ಅವಿನಾಶ ವೈದ್ಯ ಅವರು ಇಂಡಿಯಾ-ಐರ್ಲೆಂಡ್ ನಡುವಣ ತಂಡದ ಮ್ಯಾನೇಜರ್ ಆಗಿ ಬಿಸಿಸಿಐ ಆಯ್ಕೆಗೊಳಿಸಿದ್ದು ಹೆಮ್ಮೆಯ ಸಂಗತಿ ಎಂದರು.




