ಹುಬ್ಬಳ್ಳಿ : ವಾಣಿಜ್ಯ ರಾಜಧಾನಿಯಲ್ಲಿ 80ನೇ ಸ್ವಾತಂತ್ರೋತ್ಸವದ ಅಂಗವಾಗಿ ಈ ತಿಂಗಳಾಂತ್ಯದಲ್ಲಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ದೇಶದ ಅತ್ಯುತ್ತಮ ಕ್ರೀಡಾ ಬ್ರ್ಯಾಂಡ್ ಆಗಿರುವ ‘ಅಚೀವರ್’ ಕ್ರೀಡಾ ಹಾಗೂ ಜಿಮ್ ಸಲಕರಣೆಗಳ ಉತ್ಪಾದನಾ ಸಂಸ್ಥೆ ಆಯೋಜಿಸಿದೆ.

22ನೇ ವಯಸ್ಸಿನಲ್ಲಿ ‘ಮಿಸ್ಟರ್ ಹುಬ್ಬಳ್ಳಿ’ ವಿಜೇತರಾದ ಹುಬ್ಬಳ್ಳಿ ಮೂಲದ ಉದ್ಯಮಿ ಜಯರಾಮ್ ಶೆಟ್ಟಿ ಅವರು ತಮ್ಮ ಸಂಸ್ಥೆಯ ಆಶ್ರಯದಲ್ಲಿ ಉತ್ತರ ಕರ್ನಾಟಕದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಕ್ರೀಡೆಯಿಂದ ಆರೋಗ್ಯದ ಕಡೆಗೆ’ ಧ್ಯೇಯವಾಕ್ಯದೊಂದಿಗೆ ಏರ್ಪಡಿಸಿರುವ ‘ಅಚೀವರ್ ಫ್ರೀಡಮ್ ಟ್ರೋಫಿ’ ಆಹ್ವಾನಿತ ಫುಟ್ಬಾಲ್ ಪಂದ್ವಾವಳಿಯು ಆ. 28ರಿಂದ 30ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ನಾಕೌಟ್ ಮಾದರಿಯ ಈ ಪಂದ್ಯಾವಳಿಯಲ್ಲಿ 11 ಜನರ 12 ತಂಡಗಳು ಮಾತ್ರ ಪಾಲ್ಗೊಳ್ಳಲಿದ್ದು, ವಿಜೇತ ತಂಡಕ್ಕೆ 20 ಸಾವಿರ ರೂ ಬಹುಮಾನ, ರನ್ನರ್-ಅಪ್ ತಂಡಕ್ಕೆ 15,೦೦೦,ಮೂರನೇ ಸ್ಥಾನಕ್ಕೆ 10,೦೦೦ ಹಾಗೂ ನಾಲ್ಕನೇ ಸ್ಥಾನ ಪಡೆದ ತಂಡವು 5,೦೦೦ ರೂ ಪುರಸ್ಕಾರ ಪಡೆಯಲಿದೆ.

ಗೋಲ್ಡನ್ ಬಾಲ್ ಪಂದ್ಯಾವಳಿಯ ಶ್ರೇಷ್ಠ ಆಟಗಾರನಿಗೆ ಗೋಲ್ಡನ್ ಬಾಲ್, ಅತಿ ಹೆಚ್ಚು ಗೋಲು ಗಳಿಸಿದರವರಿಗೆ ಗೋಲ್ಡನ್ ಬೂಟ್ ಹಾಗೂ ಉತ್ತಮ ಗೋಲ್ ಕೀಪರ್ಗೆ ಗೋಲ್ಡನ್ ಗ್ಲೌವ್ ನೀಡಲಿದ್ದು, ಪ್ರತಿ ಪಂದ್ಯದಲ್ಲೂ ‘ಪಂದ್ಯದ ಶ್ರೇಷ್ಠ ಆಟಗಾರ’ ಪ್ರಶಸ್ತಿ ನೀಡಲಾಗುತ್ತಿದೆ.
ತಂಡಗಳ ನೋಂದಣಿಗೆ ಆಗಸ್ಟ್ 25 ಕೊನೆಯ ದಿನಾಂಕವಾಗಿದ್ದು ಪ್ರವೇಶ ಶುಲ್ಕ1999 ರೂ ಇರಲಿದೆ (ಮೊದಲು ಬಂದವರಿಗೆ ಆದ್ಯತೆ). ಹೆಚ್ಚಿನ ಮಾಹಿತಿಗೆ9880534352/8904225330 ಸಂಪರ್ಕಿಸಬಹುದಾಗಿದೆ.



