*ಹೋರಾಟಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಎಂಟ್ರಿ*
ಹುಬ್ಬಳ್ಳಿ : ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರು, ಹೋರಾಟದ ಸ್ವರೂಪವನ್ನ ಬದಲಿಸಿ, ಹತ್ತರಕಿ ಟೋಲ್ನಿಂದ ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ್ದು ಇನ್ನೊಂದೆಡೆ ಕಬ್ಬು ಬೆಳೆಗಾರರ ಬೇಡಿಕೆಗೆ ಕೇಂದ್ರ ತ್ವರಿತ ಸ್ಪಂದನೆ ಮಾಡಿದ್ದು ಜಂಟಿ ಸಮಿತಿ ರಚನೆ, ಅಧ್ಯಕ್ಷ-ಸದಸ್ಯರ ನೇಮಕ ಮಾಡಿದೆ.

ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸಿ ಹುಬ್ಬಳ್ಳಿಯತ್ತ ಹೆಜ್ಜೆ ಹಾಕಲಾರಂಬಿಸಿದ್ದಾರೆ.
ರೈತರ ದೆಹಲಿ ಸಭೆ ನಡೆದ ಎರಡೇ ದಿನದಲ್ಲಿ ಮಹತ್ತರ ಕ್ರಮ ಕೈಗೊಂಡ ಕೇಂದ್ರ ಸರ್ಕಾರ ನೀತಿ ಆಯೋಗದ ಮಾಜಿ ಸದಸ್ಯ ಪ್ರೊ.ರಮೇಶ್ ಚಂದ್ ಸಾರಥ್ಯದಲ್ಲಿ ಜಂಟಿ ಸಮಿತಿ ರಚನೆ, ಸದಸ್ಯರೂ ನೇಮಕ ಮಾಡಿದೆ. ರಾಜ್ಯದ ರೈತರನ್ನು ನೇರ ಭೇಟಿ ಮಾಡಿ ಸಮಸ್ಯೆ ಅವಲೋಕನ, ಸಮಾಲೋಚನೆಯನ್ನು ಸಮಿತಿ ಮಾಡಲಿದೆ.
ಈ ಸಮಿತಿಗೆ ಅಧ್ಯಕ್ಷರು ಮಾತ್ರವಲ್ಲ ಪ್ರಮುಖ ಸದಸ್ಯರ ನೇಮಕವೂ ಆಗಿದೆ. ಸಮಿತಿಯು ಕೇಂದ್ರ ಕೃಷಿ ಆಯುಕ್ತರು ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ (ಸಕ್ಕರೆ); ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ಕಾರ್ಯದರ್ಶಿ (ಕಾನೂನು ಮಾಪನಶಾಸ್ತ್ರ) ಅವರನ್ನು ಸದಸ್ಯರನ್ನಾಗಿ ಒಳಗೊಂಡಿದೆ.
ಪ್ರೊ.ರಮೇಶ್ ಚಂದ್ ನೇತೃತ್ವದ ಈ ಜಂಟಿ ಸಮಿತಿ ಶೀಘ್ರವೇ ಕಾರ್ಯೋನ್ಮುಖವಾಗಲಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಲಿದೆ. ಮತ್ತು ರೈತರ ಆತಂಕಗಳ ನಿವಾರಣೆಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಕೇಂದ್ರಕ್ಕೆ ಶಿಫಾರಸು ಮಾಡಲಿದೆ.
ಎಸ್ ಎಂ ಪಿ ಬಗ್ಗೆಯೂ ಕಬ್ಬು ಬೆಳೆಗಾರರ ಬೇಡಿಕೆಯಂತೆ ಇತರೆ ರಾಜ್ಯಗಳಲ್ಲಿ ನೀಡಿದಂತೆ ಕರ್ನಾಟಕದಲ್ಲೂ ರಾಜ್ಯ ಜಂಟಿ ಸಮಿತಿ ಸಮಗ್ರ ಪರಿಶೀಲನೆ ನಡೆಸಲಿದೆ.
ನಿನ್ನೆ ಅಹೋರಾತ್ರಿ ಧರಣಿ ನಡೆಸಿದ ಕಬ್ಬು ಬೆಳೆಗಾರರ ಕಹಳೆ ಎರಡನೇ ದಿನವಾದ ಇಂದು ಶಿರಹಟ್ಟಿಯ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಎಂಟ್ರಿ ಕೊಟ್ಟ ಪರಿಣಾಮ ಮತ್ತಷ್ಟು ರಂಗೇರಿದೆ. ಅಲ್ಲದೆ ಸ್ವತಃ ಯರಿಕೊಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಸೇವಿಸದಿರುವ ಶಪಥ ಮಾಡಿದ್ದಾರೆ.
ಒಟ್ಟಿನಲ್ಲಿ ರೈತರು ಹುಬ್ಬಳ್ಳಿಯತ್ತ ಮುಖ ಮಾಡಿರುವುದು ಹೋರಾಟ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.




