ಸಭೆಗೆ ಬರುವಂತೆ ಸಿಎಂಗೂ ಪತ್ರ* /
*ರಾಜ್ಯ ರಾಜಕಾರಣಕ್ಕೆ ಬರುವ ಚಿಂತನೆಯಿಲ್ಲ*
ಹುಬ್ಬಳ್ಳಿ : ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರದಲ್ಲಿ ಹಾಗೂ ನಿಂದನೆ ವಿಚಾರದಲ್ಲಿ ಇದೇ ಮೊದಲ ಬಾರಿ ಬಾಯಿ ಬಿಟ್ಟಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಾನು ಯಾರಿಗೂ ಏನನ್ನೂ ಹೇಳಿಲ್ಲ. ಬೈದವರು ನಮ್ಮವರು, ಅವರನ್ನು ಅತ್ಯಂತ ಗೌರವದಿಂದ ಆಹ್ವಾನಿಸಿ ದಿ. 12ರಂದು ಸಭೆ ನಡೆಸುವುದಾಗಿ ಹೇಳಿದರು.

ಚಿಟಗುಪ್ಪಿ ಆಸ್ಪತ್ರೆ ಪಕ್ಕದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧಿ ಜಯಂತಿಯಂದು ಗಾಂಧಿಯವರ ಸಂದೇಶದಂತೆಯೇ ಮಾತನಾಡಿ ಅವಾಚ್ಯ ಶಬ್ದದಿಂದ ತಮ್ಮನ್ನು ಟೀಕಿಸಿದ ಶಶಿಕಾಂತ ಗುರೂಜಿಯನ್ನು ಕೂಡಾ ನಿಂದಿಸಬಾರದು ಎಂದರು.
ಅಕ್ಟೋಬರ್ 12ರ ಸಭೆಗೆ ಬರುವಂತೆ ಈಗಾಗಲೇ ಸಿಎಂಗೆ ಪತ್ರ ಬರೆದಿದ್ದು, ನೀವಾದ್ರು ಬನ್ನಿ ಇಲ್ಲವೇ ಮಂತ್ರಿಗಳನ್ನಾದ್ರು ಕಳಿಸಿ ಅಂತ ಹೇಳಿದ್ದೇನೆ. ರೈತರನ್ನು ಗೌರವದಿಂದ ಕರೆದು ಸಭೆ ಮಾಡುತ್ತೇವೆ.ನಮಗೆ ಯಾರ ಮೇಲೆ ಸಿಟ್ಟು ಇಲ್ಲಾ ಎಂದು ಹೇಳಿದರು.
ಸಕ್ಕರೆ ಬೆಲೆ ಹೆಚ್ಚಾದಾಗ ಪ್ರತಿಭಟನೆಗಳಾದವು.ಸಕ್ಕರೆ ಬೆಲೆ ಹೆಚ್ಚಾದಾಗ ಮೊದಲು ಟ್ವೀಟ್ ಮಾಡಿದ್ದು ರಾಹುಲ್ ಗಾಂಧಿ. ಇದೀಗ ಬೇರೆ ರೀತಿ ಮಾತಾಡುತ್ತಿದ್ದು, ಎಂ ಎಸ್ ಪಿ ಜಾಸ್ತಿ ಮಾಡಿದ್ರೆ ಕಾರ್ಖಾನೆಯವರು ಜಾಸ್ತಿ ಬೆಲೆ ಕೊಡ್ತಾರಾ ಎಂದು ಪ್ರಶ್ನಿಸಿದರಲ್ಲದೇ ಸ್ವಾಮಿನಾಥನ್ ಅವರೇ ನನ್ನ ವರದಿ ಜಾರಿ ಮಾಡಲು ಆರಂಭಿಸಿದ್ದು ಮೋದಿ ಸರ್ಕಾರ ಅಂತ ಅವರೇ ಜೀವಂತ ಇದ್ದಾಗ ಟ್ವೀಟ್ ಮಾಡಿದ್ದರೆಂದರು.
ಕಬ್ಬಿನ ಎಥೆನಾಲ್ ಖರೀದಿಗೆ ಮೊದಲ ಆದ್ಯತೆ ನೀಡಿದ್ದೇವೆ.ಸಕ್ಕರೆ ಬೆಲೆ ಹೆಚ್ಚಾದಾಗ ಎಥೆನಾಲಗೆ ಡೈವರ್ಡ್ ಮಾಡಿದ್ದಾರೆ ಅಂತ ಕಾಂಗ್ರೆಸ್ ಹೇಳುತ್ತಾರೆ. ಆದರೆ ಸಿಎಪಿಸಿ ಕಮಿಟಿ ರಾಜ್ಯದ ಅಭಿಪ್ರಾಯ ಪಡೆದು ಬೆಲೆ ನಿಗದಿಯಾಗುತ್ತದೆ ಎಂದರು.
ರಾಜ್ಯ ಸರ್ಕಾರಗಳು ಎಸ್ ಎ ಪಿ ಮಾಡಲು ಅವಕಾಶ ಇದ್ದು,ಪಂಜಾಬ್, ಹರಿಯಾಣ, ಉತ್ತರಪ್ರದೇಶದವರು ಮಾಡಿದ್ದಾರೆ. ಕರ್ನಾಟಕದ ಕಳ್ಳ ಸರ್ಕಾರ ಯಾಕೆ ಮಾಡಿಲ್ಲಾ? ಎಂದು ಪ್ರಶ್ನಿಸಿದರಲ್ಲದೇ ನಾವು ಬೇಗ ಕಬ್ಬು ನುರಿಸಲು ಹೇಳಿಲ್ಲ. ಬದಲಾಗಿ ಹವಾಮಾನ ಮೇಲೆ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ ಎಂದರು.
ಪ್ರಹ್ಲಾದ ಜೋಶಿ ರಾಜ್ಯಾಧ್ಯಕ್ಷರಾಗುವುದು ಪಕ್ಕಾ ಎಂಬ ಗುಸು ಗುಸು ಹರಿದಾಡುತ್ತಿರುವಾಗಲೇ ಇಂದು ಆ ಬಗ್ಗೆ ಕೇಳಿದಾಗ ರಾಜ್ಯ ರಾಜಕಾರಣಕ್ಕೆ ಕಾಲಿಡುವ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ ಎಂದ ಅವರು, ಎಸ್ ಐ ಐ ವಿಚಾರದಲ್ಲಿ ೭ ತಾಸು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಮತ್ತು ಸಚಿವ ಸಂಪುಟ ಸದಸ್ಯರು ನಡೆಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಜೋಶಿ ಅವರ ಮೇಲೆ ಎಫ್ ಐ ಆರ್ ದಾಖಲಾಗಬೇಕು.ಪರವಾನಗಿ ಇಲ್ಲದೇ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದರು.
ಕೆಲ ಬಿ ಎಲ್ ಎ ಗಳ ಮೇಲೆ ಬೋಗಸ್ ಕೇಸ್ ಹಾಕಿಸಿದ್ದಾರೆ.ಅವು ಕೋರ್ಟ್ನಲ್ಲಿ ನಿಲ್ಲಲ್ಲ. ತಂತ್ರಾಂಶ ದುರುಪಯೋಗ ಅನ್ನೋದು ಶುದ್ದ ಸುಳ್ಳು ಎಂದರು.
ಡಿ ಕೆ ಶಿವಕುಮಾರ ದಡ್ಡರಲ್ಲ. ಕಾಂಗ್ರೆಸ್ ನಾಯಕರಿಗೆ ಯಾವಾಗಲೂ ಒಂದು ಎಟಿಎಂ ಆಗಬೇಕು. ಅವರನ್ನು ಸಂತೃಪ್ತಿಗೊಳಿಸಲು ಈ ರೀತಿ ಮಾಡುತ್ತಿದ್ದಾರೆ. ಎಸ್ ಐ ಆರ್ ಇನ್ನು ಮುಗಿದಿಲ್ಲಾ.ಮುಸ್ಲಿಂ ರ ಮತಗಳನ್ನೇ ಡಿಲಿಟ್ ಮಾಡಿದ್ದಾರೆ ಅಂತ ಇವರಿಗೆ ಹೇಗೆ ಗೊತ್ತಾಯ್ತು? ಎಂದು ಪ್ರಶ್ನಿಸಿದರಲ್ಲದೇ ಮತದಾರ ಪಟ್ಟಿಯಲ್ಲಿ ಸೇರೋದು ಸುಲಭ
ಡಿಲಿಟ್ ಮಾಡೋದು ಕಷ್ಟ. ಬಿಎಲ್ಓ, ಎಸಿ ಡಿಸಿ, ತಹಶಿಲ್ದಾರ ಎಲ್ಲಾ ಕೆಲಸ ಮಾಡ್ತಿರೋದು ನಿಮ್ಮ ಸರ್ಕಾರದಲ್ಲಿಯೇ ತಾನೆ ಎಂದು ಪ್ರಶ್ನಿಸಿದರು.
ಸಂಶಯಾಸ್ಪದ ಅಂತ ಕಂಡುಬಂದ್ರೆ ಫಾರ್ಮ 7 ತುಂಬಿ ಕೊಡ್ತಾರೆ.ವಿದೇಶಿ ಮತದಾರರನ್ನು ತಂದು ಗೆಲ್ಲಲು ಭಾರತ ಸಂವಿಧಾನ ಅವಕಾಶ ನೀಡಲ್ಲಾ ಎಂದರು.

ಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಮಾ.ನಾಗರಾಜ, ಶಾಸಕರಾದ ಅರವಿಂದ ಬೆಲ್ಲದ, ಲಿಂಗರಾಜ ಪಾಟೀಲ ಇತರರು ಇದ್ದರು.



