ದೀಪಾವಳಿ ಹಬ್ಬದ ಮೊದಲೇ ಗೋಕುಲ ರೋಡ್ ಠಾಣೆ*
*ಪೊಲೀಸರ ಕಾರ್ಯಾಚರಣೆ*
ಹುಬ್ಬಳ್ಳಿ: ನಗರದ ಗೋಕುಲ ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಮಲಿಂಗೇಶ್ವರ ನಗರದ ವೇಮನ್ ಸ್ಕೂಲ್ ಹತ್ತಿರದ ಮನೆಯೊಂದರಲ್ಲಿ ಲಾಭಕ್ಕಾಗಿ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ 21 ಜನರನ್ನು ಗೋಕುಲ ರೋಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಐ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಒಟ್ಟು 21ಜನ ಆರೋಪಿತರನ್ನು ವಶಕ್ಕೆ ಪಡೆದು, ಅವರಿಂದ43,050 ರೂ. ನಗದು ಹಣ, ಇಸ್ಪೀಟ್ ಎಲೆ ಇತ್ಯಾದಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದ ರಾಮಲಿಂಗೇಶ್ವರನಗರದ ಚಂದ್ರು ಲಕ್ಷ್ಮಣ ಬಂಡಿವಡ್ಡರ, ಸಂಗಮೇಶ ಹನುಮಂತಪ್ಪ ತೇಜಿ, ಜಮೀರ ಅಕ್ಷರ ಅಳಿಹೊಸೂರ, ಸುಭಾಷ ಸಿದ್ದಪ್ಪ ಗೋಡಕೆ, ಚೇತನ ಚನ್ನಬಸು ಮಡಿವಾಳರ, ಬಾಬು ರಾಜೇಸಾಬ ಸುಭಾನಿ, ಜಯರಾಮ ವೆಂಕಟೇಶ ಜಾಲಿಹಾಳ, ಮುತ್ತು ಸುಭಾಷ ಉತಳೇಕರ, ಆನಂದನಗರದ ರಾಜೇಸಾಬ ಫತೇಸಾಬ ಧಾರವಾಡ, ಮಹಾಂತೇಶ ಹನುಮಂತಪ್ಪ ಕೊಂಚಿಕೊರವರ್ , ಕಿರಣ ಅನಂತರಾವ್ ಅರ್ಕಸಾಲಿ, ಆಸೀಫ್ ಮಾಬುಸಾಬ ಖಲಂದರ, ಮಂಜುನಾಥ ಹನುಮಂತಪ್ಪ ಬಜಂತ್ರಿ, ವಸಂತ ರಾಮಣ್ಣ ಭೋವಿ, ಲೋಹಿಯಾನಗರದ ಮಾಂತಯ್ಯ ಚನ್ನಯ್ಯ ನೀಲಮ್ಮನಮಠ, ಸೈಯದಸಾಬ ಹಜರೇಸಾಬ ಹಲಸಂಗಿ, ಹೆಗ್ಗೇರಿ ಜಗದೀಶನಗರದ ಅಕ್ಷಯ ಸಿದ್ದಪ್ಪ ಮುದ್ದಿ, ಅಮರ ನಾಗರಾಜ ಮುದ್ದಿ, ಗಾಂಧಿನಗರದ ಶಿವಕುಮಾರ ಪ್ರಭುಗೌಡ ಏವೂರ, ಗೋಕುಲ ಗ್ರಾಮದ ಚಂದ್ರಶೇಖರ ವಿರುಪಾಕ್ಷಪ್ಪ ಸಂದಿಮನಿ, ಹಾಗೂ ಕೃಷ್ಣಾ ಕಾಲೋನಿಯ ಗಂಗಪ್ಪ ಕೊಳಗಪ್ಪ ಕೊರವರ ಎಂಬುವರೇ ಬಂಧಿಸಲ್ಪಟ್ಟವರಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಅಕ್ರಮ ಜೂಜಾಟ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ನಿರಂತರ ನಿಗಾ ವಹಿಸಲಾಗುತ್ತಿದ್ದು, ಇಂತಹ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ್ ಬೋರಸೆ ತಿಳಿಸಿದ್ದಾರೆ.



