ಬೆಂಗಳೂರು: ಬಿಜೆಪಿ ಮುಖಂಡ , ಜಿ.ಪಂ. ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಧಾರವಾಡ ಗ್ರಾಮೀಣ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ ಶಿಕ್ಷೆಯ ಪ್ರಮಾಣ ಪ್ರಕಟಿಸಿತು. ನ್ಯಾಯಾಲಯವು ಕೊಲೆ ಮತ್ತು ಅಪರಾಧ ಪಿತೂರಿ ಸೇರಿದಂತೆ ಗಂಭೀರ ಆರೋಪಗಳಲ್ಲಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ, ಪ್ರತಿಯೊಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿ,ಜೊತೆಗೆ ತಲಾ ₹30,000 ದಂಡ ಪಾವತಿಸಲು ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ತೀರ್ಪಿನಲ್ಲಿ ಹೇಳಿದ್ದಾರೆ.
19ನೇ ಆರೋಪಿ ಟಿಂಗರೀಕರ್ ಗೆ ಏಳು ವರ್ಷ ಶಿಕ್ಷೆ ಮತ್ತು ಯೋಗೀಶ್ ಮಕ್ಕಳಿಗೆ ಹದಿನಾರು ಲಕ್ಷ ನೀಡಲು ಸೂಚಿಸಲಾಗಿದೆ.
ತೀರ್ಪಿನ ನಂತರ ವಿನಯ್ ಕುಲಕರ್ಣಿ ಪರ ವಕೀಲರು ಮೇಲ್ಮನವಿ ಸಲ್ಲಿಸಬಹುದು ಎನ್ನಲಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಧಾರವಾಡ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.




