ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು 5-30ಕ್ಕೆ ಪ್ರಕಟಿಸಿದ್ದು ಮಾಜಿ ಸಚಿವ, ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ದೋಷಿ ಎಂದು ಹೇಳಿದೆ.
ಪ್ರಕರಣದ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದು, ಅವರ ಹಾಜರಿಯನ್ನು ದಾಖಲಿಸಿಕೊಂಡು ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ತೀರ್ಪು ಪ್ರಕಟಿಸಿದರು.

ನಾಳೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ತೀರ್ಪು ಪ್ರಕಟಿಸಿದ ನಂತರ ಕೂಡಲೇ ಆರೋಪಿಗಳನ್ನು ವಶಕ್ಕೆಪಡೆಯಲು ಪೊಲೀಸರಿಗೆ ಸೂಚಿಸಿದರು.
ತೀರ್ಪು ಹಿನ್ನೆಲೆಯಲ್ಲಿ ಧಾರವಾಡ ನಗರ, ಗ್ರಾಮೀಣ ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ. ವಿನಯ ಸಹಿತ ಇತರ ಹದಿನೇಳು ಆರೋಪಿಗಳನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ . ನಾಳೆ ಪುನಃ ಕೋರ್ಟ್ ಗೆ ಹಾಜರು ಪಡಿಸಲು ಸೂಚನೆ ನೀಡಲಾಗಿದೆ.




