*ಫ್ಲೋರಿಡಾ ಸಮುದ್ರದಲ್ಲಿ ಬಂದಿಳಿದ ವಿಜ್ಞಾನಿಗಳ ತಂಡ* – *ನಾಸಾ ಧನ್ಯವಾದ*
ಫ್ಲೋರಿಡಾ : ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ(ಐಎಸ್ಎಸ್)ದಲ್ಲಿ 286 ದಿನಗಳು (9 ತಿಂಗಳು), ಗ್ರಹಗಳಿಗೆ 4,577 ಸುತ್ತುಗಳು ಹಾಗೂ 195.2 ಮಿಲಿಯನ್ ಕಿಲೋ ಮೀಟರ್ ದೂರ ಹಾರಿ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಅವರನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಜಂಟಿಯಾಗಿ ಕೊನೆಗೂ ಭೂಮಿಗೆ ಕರೆ ತರುವಲ್ಲಿ ಯಶಸ್ವಿಯಾಗಿದೆ.
ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗಿನ ಜಾವ 3.27ರ ಸುಮಾರಿಗೆ ಪ್ಯಾರಚೂಟ್ ತೆರೆದುಕೊಂಡು ಅದರ ಮುಖಾಂತರ ಅಮೆರಿಕದ ಫ್ಲೋರಿಡಾದ ಸುನೀತಾ ಸಹಿತ ವಿಜ್ಞಾನಿಗಳ ತಂಡ ಸಮುದ್ರದ ಮೇಲೆ ಇಳಿದಿದೆ .
ಈ ತಂಡವನ್ನು ಸಮುದ್ರದಿಂದ ಸುರಕ್ಷಿತವಾಗಿ ಕ್ರೂ ಡ್ರಾಗನ್ ನೌಕೆ ಮೂಲಕನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಅವರನ್ನು ಕರೆ ತರಲಾಗಿದೆ.ಬಳಿಕ ಗಗನಯಾತ್ರಿಗಳ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ 4 ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಕ್ಯಾಪ್ಸೂಲ್ ಐಎಸ್ಎಸ್ನಿಂದ ಹೊರಟಿತ್ತು. ಕಳೆದ ವರ್ಷ ಜೂ.5ರಂದು ಬೋಯಿಂಗ್ ಸ್ಟಾರ್ಲೈನರ್ ನೌಕೆಯಲ್ಲಿ ಈ ಇಬ್ಬರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಿದ್ದರು.
ಎಲ್ಲವೂ ನಾವು ನಿರೀಕ್ಷಿಸಿದಂತೆ ಆಗಿದೆ, ಎಲ್ಲ ಗಗನಯಾತ್ರಿಗಳು ಸುರಕ್ಷಿತವಾಗಿದ್ದು, ಸ್ಪೇಸ್ ಎಕ್ಸ್ಗೆ ಧನ್ಯವಾದಗಳನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಧನ್ಯವಾದಗಳ ತಿಳಿಸಿದೆ.
ಸುನೀತಾ ಗುಜರಾತ್ ಮೂಲದವರಾಗಿದ್ದು, ಜುಲಾಸನ್ ಗ್ರಾಮದಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆದಿದೆ.