ಹುಬ್ಬಳ್ಳಿ : ಐಪಿಎಲ್ ಚುಟುಕು ಸಮರದ ಕಾವು ಏರಿರುವಾಗಲೇ ಪ್ರತಿಷ್ಠಿತ ಹುಬ್ಬಳ್ಳಿಯ ಕೆ ಎಲ್ಇ ತಾಂತ್ರಿಕ ವಿಶ್ವ ವಿದ್ಯಾಲಯ ದಿ.15 ರಿಂದ 21ರವರೆಗೆ ಕೆ. ಎಲ್. ಇ. ಟಿ-20 ಕ್ರಿಕೇಟ್ ಪಂದ್ಯಾವಳಿಯನ್ನು ವಿಶ್ವವಿದ್ಯಾಲಯದ ಆವರಣದ ಟರ್ಫ್ ಮೈದಾನದಲ್ಲಿ ಆಯೋಜಿಸಿದೆ.
ಕೆ. ಎಲ್ಇ ಅಂಗ ಸಂಸ್ಥೆ ಗಳ ಬೆಂಗಳೂರು, ನವಿ
ಮುಂಬೈ, ಬೆಳಗಾವಿ, ಗದಗ, ಹಾಗೂ ಹುಬ್ಬಳ್ಳಿ ಧಾರವಾಡದ ಪದವಿ ಮಹಾವಿದ್ಯಾಲಯ,ತಾಂತ್ರಿಕ ವಿದ್ಯಾ ಲಯ, ಫಾರ್ಮಸಿ ಹಾಗೂ ವೈದ್ಯಕೀಯ ವಿದ್ಯಾ ಲಯದ 17 ತಂಡಗಳು ಈ ಪಂದ್ಯಾ ವಳಿಯಲ್ಲಿ ಭಾಗವಹಿಸಲಿದ್ದು ದಿನಕ್ಕೆ ಮೂರು ಪಂದ್ಯಗಳನ್ನು ಆಡಲಾಗುತ್ತದೆ.
ಪಂದ್ಯಾವಳಿ ನಾಕೌಟ್ ಮಾದರಿಯದ್ದಾಗಿದ್ದು ನಾಳೆ 15ರಂದು ಬೆಳಿಗ್ಗೆ 10 ಘಂಟೆಗೆ ವಿವಿ ಡಾ. ಎಫ್. ಜಿ .ತೇವರಿ ಉದ್ಘಾಟಿಸಲಿದ್ದು ಕುಲಸಚಿವ ಡಾ. ಬಿ ಎಸ್ ಅನಾಮಿ, ಅಕಾಡೆಮಿಕ್ ಡೀನ್ ಡಾ. ಎನ್ ಎಚ್. ಅಯಾಚಿತ್, ವಿದ್ಯಾರ್ಥಿ
ಚಟುವಟಿಕೆಗಳ ಡೀನ್ ಡಾ. ಸಂಜಯ ಕೊಟಬಾಗಿ ಇವರು ಉಪಸ್ಥಿತರಿರಲಿದ್ದಾರೆ.
ವಿಜೇತ ತಂಡವು 50,000ರೂ ನಗದು ಬಹುಮಾನ ಹಾಗೂ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡವು 25,000ರೂ ನಗದು ತನ್ನದಾಗಿಸಿಕೊಳ್ಳಲಿದೆ. ಪ್ರತಿ ಪಂದ್ಯಕ್ಕೆ ಪಂದ್ಯ ಪುರುಷ ಮತ್ತು ಪ್ರಶಸ್ತಿ ಹಾಗೂ ಪಂದ್ಯಾ ವಳಿಯ ಶ್ರೇಷ್ಠ
ಆಟಗಾರ, ಶ್ರೇಷ್ಠ ಬ್ಯಾಟ್ಸ್ ಮನ್ ಹಾಗೂ ಶ್ರೇಷ್ಠ ಬಾಲರ್ ಪ್ರಶಸ್ತಿಯನ್ನು ಸಹ ನೀಡಲಿದೆ ಎಂದು ವಿ.ವಿ.ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ಸಂಯೋಜಕ ವಿಜಯಕುಮಾರ ನಿಂಬ್ಗಲ್ ತಿಳಿಸಿದ್ದಾರೆ.