*ಶಿವಪ್ರಕಾಶ್ ನಾಯಕ್ ಕಲಬುರಗಿ ಪಿ ಟಿ ಎಸ್ ಗೆ*/
*23 ಡಿವೈಎಸ್ಪಿಗಳ ವರ್ಗಾವಣೆ*
ಹುಬ್ಬಳ್ಳಿ : ರಾಜ್ಯ ಸರ್ಕಾರ ಇಪ್ಪತ್ಮೂರು ಡಿವೈಎಸ್ಪಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ಉತ್ತರ ವಿಭಾಗದ ನೂತನ ಎಸಿಪಿಯಾಗಿ ಈ ಹಿಂದೆ ಅವಳಿನಗರದ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿರುವ ಶಿವಾನಂದ ಚಲವಾದಿ ನಿಯುಕ್ತಿಗೊಂಡಿದ್ದಾರೆ.
ಇದುವರೆಗೆ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸಿದ ಶಿವಪ್ರಕಾಶ್ ನಾಯಕ್ ಕಲಬುರಗಿ ನಾಗೇನಹಳ್ಳಿ ಪಿಸಿಬಿಗೆ ವರ್ಗಾವಣೆ ಗೊಂಡಿದ್ದಾರೆ.

ಬೆಂಗಳೂರು ಹಲಸೂರು ಗೇಟ್ ರಿಂದ ಸಿಐಡಿಗೆ ವರ್ಗಾವಣೆ ಆದೇಶದಲ್ಲಿ ಇದ್ದ ಚಲವಾದಿ ಹುಬ್ಬಳ್ಳಿ ಉತ್ತರಕ್ಕೆ ಬರುವುದೆಂಬ ಗುಸು ಗುಸು ಕಳೆದ ಹದಿನೈದು ದಿನಗಳಿಂದ ಕೇಳಿ ಬರುತ್ತಿತ್ತು. ಇಂದು ಅಧಿಕೃತವಾಗಿ ಆದೇಶ ಬಂದಿದೆ. ಹಳೇ ಹುಬ್ಬಳ್ಳಿ, ಹುಬ್ಬಳ್ಳಿ ಶಹರ, ಮುಂಡಗೋಡ ಗಳಲ್ಲಿ ಚಲವಾದಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.




