*ಪ್ರಕಾಶ್ ಘಾಟಗೆ ಮುಂದುವರಿಕೆ – ಮೆಹಬೂಬ್ ಪಠಾಣ, ಸಂತೋಷ ಪೂಜಾರ, ಸಾದಿಕ್ ಯಕ್ಕುಂಡಿ ನೇಮಕ*
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಮಾಜಿ ಪಾಲಿಕೆ ಸದಸ್ಯ ಬಶೀರ್ ಅಹ್ಮದ್ ಗೂಡಮಾಲ್ ಸೇರಿದಂತೆ ನಾಲ್ವರನ್ನು ಹೊಸದಾಗಿ ಸರ್ಕಾರ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಿದೆ.

ಈ ಹಿಂದೆ ನಾಮ ನಿರ್ದೇಶನಗೊಂಡ ಪ್ರಕಾಶ್ ಘಾಟಗೆ ಮುಂದುವರಿದಿದ್ದು ಉಳಿದ ನಾಲ್ವರ ಸ್ಥಾನದಲ್ಲಿ ಹೊಸಬರು ನಾಮ ನಿರ್ದೇಶನ ಮಾಡಲಾಗಿದೆ.

ಧಾರವಾಡದ ಮೆಹಬೂಬ್ ಖಾನ್ ಪಠಾಣ, ಹುಬ್ಬಳ್ಳಿಯ ಸಂತೋಷ್ ರಾಜಪ್ಪ ಪೂಜಾರ, ಬಶೀರ್ ಅಹ್ಮದ್ ಗೂಡಮಾಲ್ ಹಾಗೂ ಮಹಮ್ಮದ್ ಸಾದಿಕ್ ಯಕ್ಕುಂಡಿ ಹೊಸದಾಗಿ ನೇಮಕ ಮಾಡಲಾಗಿದೆ.

ನಾಮನಿರ್ದೇಶನ ಮಾಡಿ ಜನರ ಸೇವೆಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ ಸರ್ಕಾರಕ್ಕೆ ಹಾಗೂ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಗೂಡಮಾಲ್ ಪ್ರಾಮಾಣಿಕವಾಗಿ ಜನ ಸೇವೆ ಮಾಡುವುದಾಗಿ ಹೇಳಿದ್ದಾರೆ.




