ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ನ ಐವರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದಲ್ಲೇ ಗೆಲುವು ಸಾಧಿಸಿದ್ದು ಬಿಜೆಪಿಯ ಇಬ್ಬರು ಅಂತಿಮವಾಗಿ ವಿಜಯಿಯಾಗಿದ್ದಾರೆ.
7ನೇ ಸ್ಥಾನಕ್ಕಾಗಿ ಕಾಂಗ್ರೆಸ್ನ ವಿನಯ್ ಕಾರ್ತಿಕ್ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ನ ಗೋವಿಂದರಾಜು ಭಾರೀ ತುರುಸಿನ ಪೈಪೋಟಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತ ವಿನಯ ಕಾರ್ತೀಕ ಅತಿ ಹೆಚ್ಚು ಮತಗಳ ಮೂಲಕ ಆಯ್ಕೆಯಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಭಾರೀ ಮುಖಭಂಗವಾಗಿದೆ.

ಬಿಜೆಪಿಯಿಂದ ನಾಲ್ವರು ಹಾಗೂ ಜೆಡಿಎಸ್ನಿಂದ ಏಳು ಶಾಸಕರು ಅಡ್ಡ ಮತದಾನ ಮಾಡಿದ್ದು, ವಿಪಕ್ಷ ಬಿಜೆಪಿಗೆ ತನ್ನ ಮತವನ್ನೇ ರಕ್ಷಿಸಿಕೊಳ್ಳಲಾಗಿಲ್ಲವಾಗಿದ್ದು ಬಿಜೆಪಿ ಅಭ್ಯರ್ಥಿ ಹುಬ್ಬಳ್ಳಿ ಮೂಲದ ಲಿಂಗರಾಜ ಪಾಟೀಲ ಎಲಿಮಿನೇಶನ್ ರೌಂಡ್ನಲ್ಲಿ27.63 ಕ್ಕಿಂತ ಹೆಚ್ಚು ಮತ ಪಡೆದು ಅಂತಿಮವಾಗಿ ಆಯ್ಕೆಯಾಗಿದ್ದು, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಕೇವಲ 14ಮತ ಪಡೆದಿದ್ದು, ಬಿಜೆಪಿ ಉಚ್ಚಾಟಿತ ಬಸನಗೌಡ ಪಾಟೀಲ ಮತ ಅಸಿಂಧುವಾಗಿದೆ.
ಕಾಂಗ್ರೆಸ್ವ ಉಳಿದ ಅಭ್ಯರ್ಥಿಗಳಾದ ಬಿ.ಕೆ.ಹರಿಪ್ರಸಾದ, ತಿಮ್ಮಪ್ಪಣ್ಣ ಕಮಕನೂರ, ಬಿ.ಎಸ್.ಶಿವಣ್ಣ ತಲಾ 30 ಮತ ಪಡೆದರೆ, ಪಿ.ವಿ.ಮೋಹನ 29ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಇನ್ನೋರ್ವ ಅಭ್ಯರ್ಥಿ ರಘು ಕೌಟಿಲ್ಯ ಸಹ 29 ಮತ ಪಡೆದಿದ್ದಾರೆ.ಬಿಜೆಪಿಯ ಅಭ್ಯರ್ಥಿ ಲಿಂಗರಾಜ ಪಾಟೀಲಗೆ 30 ಮತ ನಿಗದಿಗೊಳಿಸಲಾಗಿದ್ದರೂ ಕೇವಲ 27 ಮತಗಳು ಬಂದಿದ್ದು ಮತದಾನವಾದ 222 ಮತಗಳ ಪೈಕಿ ಒಂದು ಮತ ಅಸಿಂಧುಗೊಂಡಿದೆ.
ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಬೆಳಿಗ್ಗೆಯಿಂದಲೇ ಮತದಾನ ನಡೆದಿತ್ತು.
ಕೊನೆಯ ಕ್ಷಣದಲ್ಲಿ ತಂತ್ರಗಾರಿಕೆ ಬದಲಿಸಿದ ಬಿಜೆಪಿ,ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳ ಚಲಾವಣೆ ಮಾಡಿದ್ದರಿಂದ ಜೆಡಿಎಸ್ಗೆ ಜೆಡಿಎಸ್ ಗೆ ಹೆಚ್ಚುವರಿಯಾಗಿ ಎರಡು ಮತಗಳನ್ನು ಮಾತ್ರ ಬಿಜೆಪಿ ಬಿಟ್ಟು ಕೊಟ್ಟು ಮಧ್ಯಾಹ್ನವೇ ಶಾಕ್ ನೀಡಿತ್ತು.
ಜೆಡಿಎಸ್ನ ಹಿರಿಯ ನಾಯಕ ಹಾಗೂ ಶಾಸಕ ಜಿ.ಟಿ. ದೇವೇಗೌಡ, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಹಾಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಅಡ್ಡ ಮತದಾನ (ಕ್ರಾಸ್ ವೋಟಿಂಗ್) ಮಾಡಿದ್ದು ಆತ್ಮಸಾಕ್ಷಿಯ ಮತ ಚಲಾವಣೆ ಮಾಡಿರುವುದಾಗಿ ಹೇಳಿದ್ದಾರೆ.
ಅಂತಿಮವಾಗಿ ಆಡಳಿತಾರೂಢ ಕಾಂಗ್ರೆಸ್ ತನ್ನ ತಂತ್ರಗಾರಿಕೆಯಿAದ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಗೂ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದು ಸಿಎಂ ಡಿ.ಕೆ.ಶಿವಕುಮಾರ ಪಟ್ಟ ಮತ್ತಷ್ಟು ಭದ್ರವಾದಂತಾಗಿದೆ. ಬಿಜೆಪಿ ಪಾಲಿಗೆ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಮೈತ್ರಿಯಲ್ಲೂ ಬಿರುಕು ಮೂಡುವ ಸಾಧ್ಯತೆ ದಟ್ಟವಾಗಿದೆ.




