ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಬಸವರಾಜ್ ಮುತ್ತಗಿ ಕಾರು ಚಾಲಕ ಮತ್ತು ಕುಟುಂಬಕ್ಕೆ ಪುಂಡರು ಜೀವ ಬೆದರಿಕೆ ಹಾಕಿದ ಘಟನೆ ದಿ. 3ರಂದು ನಡೆದಿದೆ.

ಮುತ್ತಗಿ ಕಾರು ಚಾಲಕ ತಾಲೂಕಿನ ಕುರಬಗಟ್ಟಿ ಗ್ರಾಮದ ಪ್ರಕಾಶ್ ಯಲ್ಲಪ್ಪ ನವಲೂರು ಎಂಬಾತನೇ ಜೀವ ಬೆದರಿಕೆಗೆ ಒಳಗಾದವನಾಗಿದ್ದಾನೆ.
ಅಕ್ಟೋಬರ್ 3 ರಂದು ಮಧ್ಯಾಹ್ನ 3-30ಕ್ಕೆ ಬೈಕ್ ಮೆಲೆ ಬಂದ 6 ಜನ ಪುಂಡರು ಪ್ರಕಾಶ್ ನವಲೂರು ಮನೆಗೆ ನುಗ್ಗಿ ಪ್ರಕಾಶ್ ಹಾಗೂ ಆತನ ಪತ್ನಿ ಲಲಿತಾಗೂ ಬೆದರಿಕೆ ಹಾಕಿದ್ದಲ್ಲದ್ದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ನೀನು ಬಸವರಾಜ ಮುತಗಿ ಅವರ ಕಾರು ಚಾಲನೆ ಮಾಡಬಾರದು. ಮುತಗಿ ಕಡೆ ಕೆಲಸವನ್ನು ಮಾಡಬಾರದು ಕೆಲಸ ಬಿಡಬೇಕು ಎಂದು ಬೆದರಿಕೆ ಹಾಕಿದ್ದಾರೆ.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾದಾಗಿನಿಂದ ಜೀವಕ್ಕೆ ಬೆದರಿಕೆ ಇರುತ್ತದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕು ಎಂದು ಪ್ರಕಾಶ್ ನವಲೂರು ಅಕ್ಟೋಬರ್ 3 ಗಂಟೆಗೆ ಗರಗ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಗರಗ ಠಾಣಾ ಪೊಲೀಸರು ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ 6ಜನ ಯುವಕರ ಪತ್ತೆಗಾಗಿ ಜಾಲ ಬೀಸಿದ್ದಾರೆ.



