*ಅನಿಶ್ಚಿತತೆಯಲ್ಲಿ ಪಾಲಿಕೆ ಚುನಾವಣೆ*
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಉಪಮೇಯರ್ ಚುನಾವಣೆ ಮುಹೂರ್ತಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮಹಾನಗರ ಪಾಲಿಕೆಯಿಂದ ಚುನಾವಣೆ ದಿನಾಂಕ ನಿಗದಿ ಮಾಡುವಂತೆ ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಈಗಾಗಲೇ ಪತ್ರ ಬರೆದಿರುವಾಗಲೇ ಈ ಬೆಳವಣಿಗೆ ನಡೆದಿದೆ.
ನಿಗದಿಯಾದ ಮೀಸಲಾತಿ ಅನ್ವಯ ಪ್ರಸ್ತುತ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಉಪಮೇಯರ್ ಸಾಮಾನ್ಯರಿಗೆ ನಿಗದಿಯಾಗಿತ್ತು.ಇದನ್ನು ಪ್ರಶ್ನಿಸಿ ಪಾಲಿಕೆ ಹಿರಿಯ ಸದಸ್ಯ ಶಿವು ಮೆಣಸಿನಕಾಯಿ ಕೋರ್ಟ್ ಮೆಟ್ಟಿಲೇರಿದ್ದರು.
ಈಗಾಗಲೇ ಮಂಗಳೂರು, ಬೆಳಗಾವಿ ಪಾಲಿಕೆಗಳಿಗೆ ಎರಡು ಮೂರು ಬಾರಿ ಸಾಮಾನ್ಯರಿಗೆ ಮೀಸಲು ನೀಡಿದ್ದು, ಎರಡನೇ ಅತಿ ದೊಡ್ಡ ಪಾಲಿಕೆಗೆ ಎರಡು ಬಾರಿ ಸಾಮಾನ್ಯ ಮಹಿಳೆಗೆ ನೀಡಿದ್ದಾರೆ. ಇದರಿಂದ ಸಾಮಾನ್ಯರಿಗೆ ಅನ್ಯಾಯವಾಗಿದೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪೂರ್ವ ಕ್ಷೇತ್ರದ ವ್ಯಾಪ್ತಿಗೆ ಬರುವ 73ನೇ ವಾರ್ಡಿನ ಸದಸ್ಯೆ ಹಾಲಿ ಪೂರ್ವ ಅಧ್ಯಕ್ಷ ಮಂಜುನಾಥ ಕಾಟ್ಕರ್ ಪತ್ನಿ ಶೀಲಾ ಕಾಟ್ಕರ್, ಬರದ್ವಾಡ ಮೇಯರ್ ಆಗುವ ವೇಳೆ ಕೂಡ ರೇಸ್ ನಲ್ಲಿ ಇದ್ದ
ಮೀನಾಕ್ಷಿ ವಂಟಮೂರಿ (ವಾರ್ಡ್), ಜ್ಯೋತಿ ಪಾಟೀಲ್(19ನೇ ವಾರ್ಡ್ ) ಹಾಗೂ ಅನಿತಾ ಚಳಗೇರಿ (ವಾರ್ಡ್ 1) ಪ್ರೀತಿ ಲದವಾ, ಪೂಜಾ ಶೇಜವಾಡಕರ ಅವರ ಹೆಸರುಗಳೂ ಮುಂಚೂಣಿಗೆ ಬಂದಿದ್ದವು.
82 ಸದಸ್ಯ ಬಲ ಹೊಂದಿರುವ ಪಾಲಿಕೆಯಲ್ಲಿ ಬಿಜೆಪಿ 39 ಸದಸ್ಯ ಬಲ ಹೊಂದಿದ್ದು ಮೂರು ಪಕ್ಷೇತರ, ಓರ್ವ ಜೆಡಿಎಸ್ ಬೆಂಬಲದೊಂದಿಗೆ 43 ಸದಸ್ಯರ ಸಂಖ್ಯೆಯಾಲಿದೆ.ಅಲ್ಲದೇ ಐವರು ಜನ ಪ್ರತಿನಿಧಿಗಳ ಮತಾಧಿಕಾರವೂ ಇದೆ. ಇಬ್ಬರು ಪಕ್ಷೇತರರು ಸೇರಿದಂತೆ ಕಾಂಗ್ರೆಸ್ 35, ಎಐಎಂಐಎಂನ ಮೂರು ಸದಸ್ಯರಿದ್ದಾರೆ.
ಜೂನ್ 28ರವರೆಗೆ ಪ್ರಸಕ್ತ ಮೇಯರ್ ಅಧಿಕಾರವಿದ್ದು ಕೋರ್ಟ್ ತಡೆಯಿಂದ ಈಗ ಚುನಾವಣೆ ಅನಿಶ್ಚಿತ ವಾಗಿದೆ.